ಡಾ.ಮಂಜುನಾಥ್‌ರಿಂದ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ

ಆನೇಕಲ್, ಏ.೪:ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ರವರು ಕಳೆದ ೩೫ ವರ್ಷಗಳಿಂದ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಇಂತಹ ಜನಪರ ವ್ಯಕ್ತಿ ಲೋಕಸಭೆ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆದ್ದು ಪಾರ್ಲಿಮೆಂಟ್ ಪ್ರವೇಶ ಮಾಡಲಿ ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ರವರು ಶುಭ ಹಾರೈಸಿದರು.
ಅವರು ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಡಾ ಮಂಜುನಾಥ್ ರವರು ಜಯದೇವ ಆಸ್ಪತ್ತೆಯಲ್ಲಿ ವೈದ್ಯರಾಗಿ ಲಕ್ಷಾಂತರ ಜನರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಇಂತಹ ಜನಪರ ವ್ಯಕ್ತಿ ಪ್ರದಾನಿ ನರೇಂದ್ರ ಮೋದಿರವರ ಆಡಳಿತದಲ್ಲಿ ಸಚಿವರಾಗಿ ಇನ್ನಷ್ಠು ಜನರ ಸಮಾಜ ಸೇವೆ ಮಾಡುವಂತಹ ಶಕ್ತಿ ಭಗವಂತ ಡಾ ಮಂಜುನಾಥ್ ರವರಿಗೆ ಕಲ್ಪಿಸಲಿ ಎಂದರು. ಡಾ|| ಮಂಜುನಾಥ್ ರವರಂತಹ ಉತ್ತಮ ಅಭ್ಯರ್ಥಿ ನಮಗೆ ಸಿಕ್ಕಿರುವುದೇ ಪುಣ್ಯವಾಗಿದ್ದು, ಧರ್ಮ ಮತ್ತು ಅಧರ್ಮಕ್ಕೆ ನಡೆಯುವ ಚುನಾವಣೆಯಲ್ಲಿ ಕೊನೆಗೆ ಡಾ ಮಂಜುನಾಥ್ ರವರು ಗೆಲ್ಲುವ ಮೂಲಕ ಕೊನೆಗೆ ಧರ್ಮವೇ ಉಳಿಯುತ್ತದೆ ಎಂದು ಹೇಳಿದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿರವರು ಮಾತನಾಡಿ ಬಿಜೆಪಿ ಅಭ್ಯರ್ಥಿ ಡಾ|| ಸಿ.ಎನ್ ಮಂಜುನಾಥ್ ರವರು ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಇದರಲ್ಲಿ ಅನುಮಾನ ಬೇಡ ಎಂದರು. ಈಗಾಗಲೇ ಡಾ ಸಿಎ.ಎನ್. ಮಂಜುನಾಥ್ ರವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉತ್ತಮ ಬೆಂಬಲ ದೊರೆಯುತ್ತಿದ್ದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರುಗಳು ಮನೆ ಮನೆಗೆ ತೆರಳಿ ಡಾ ಮಂಜುನಾಥ್ ರವರ ಸಾದನೆಗಳು ಹಾಗೂ ನರೇಂದ್ರ ಮೋದಿರ ಆಡಳಿತದಲ್ಲಿ ಮಾಡಿರುವ ಕಾರ್ಯಕ್ರಮಗಳನ್ನು ಮತದಾರರಿಗೆ ತಿಳಿಸಿ ಬಿಜೆಪಿಗೆ ಮತ ನೀಡುವಂತೆ ಮತದಾರರನ್ನು ಪ್ರೇರೇಪಿಸಬೇಕು ಎಂದು ಹೇಳಿದರು.
ಇನ್ನು ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ ಸಿ.ಎನ್ ಮಂಜುನಾಥ್ ರವರು ಸಾರ್ವಜನಿಕವಾಗಿ ಮತಯಾಚನೆ ಮಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಬಾಗವಹಿಸಿದ್ದರು.