ಡಾ.ಭೀಮಣ್ಣ ಖಂಡ್ರೆ ಶತಮಾನೋತ್ಸವಕ್ಕೆ ಸುತ್ತೂರು ಶ್ರೀಗಳಿಗೆ ಆಹ್ವಾನ

ಭಾಲ್ಕಿ:ನ.17: ಸ್ವಾತಂತ್ರ್ಯ ಹೋರಾಟಗಾರ, ಗಡಿಭಾಗದ ಹಿರಿಯ ಚೇತನ ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಸುತ್ತೂರು ಮಠದ
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಹ್ವಾನ ನೀಡಲಾಗಿದೆ.

ಬೆಂಗಳೂರಿನಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಶ್ರೀಗಳನ್ನು ಭೇಟಿಯಾಗಿ, ಭಾಲ್ಕಿಯ ಪಟ್ಟಣದಲ್ಲಿ ಡಿ.2ರಂದು ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿದೆ.

ತಾವುಗಳು ಆ ಸಮಾರಂಭದ ಸಾನ್ನಿಧ್ಯ ವಹಿಸಿ ಡಾ.ಭೀಮಣ್ಣ ಖಂಡ್ರೆ ಅವರ ಜತೆಗೆ ಜಿಲ್ಲೆಯ ಭಕ್ತರನ್ನು ಆಶೀರ್ವದಿಸುವಂತೆ ಕೋರಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ರವಿ ಬೊರವೇಲ್ಸ್ ಮಾಲೀಕ ರವೀಂದ್ರ ಚಿಡಗುಪ್ಪೆ, ಭಾತಂಬ್ರಾ ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಾದೇವ ಬೇಲೂರೆ ಇದ್ದರು.

ಬಸವಕಲ್ಯಾಣದಲ್ಲಿ ನ.25 ಮತ್ತು 26ರಂದು ಜರುಗಲಿರುವ 44ನೆಯ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಮತ್ತು ಡಿ.2ರಂದು ನಡೆಯುವ ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಸಮಾರಂಭಕ್ಕೆ ಸುತ್ತೂರು ಶ್ರೀಗಳನ್ನು ಆಹ್ವಾನ ನೀಡಲಾಗಿದೆ. ಈ ಎರಡು ಐತಿಹಾಸಿಕ ಸಮಾರಂಭದಲ್ಲಿ ಸುತ್ತೂರು ಶ್ರೀಗಳು ಭಾಗಿಯಾಲಿದ್ದಾರೆ.

  • ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರು ಬೀದರ್