ಡಾ.ಬಿ.ಆರ್. ಅಂಬೇಡ್ಕರ ೧೩೦ನೇ ಜಯಂತಿ ಆಚರಣೆ

ಸಿರವಾರ.ಏ.೩೦-ತಾಲೂಕಿನ ಮಾಚನೂರು ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಗ್ರಾಮ ಘಠಕ ಮತ್ತು ಅಂಬೇಡ್ಕರ್ ಯುವಕ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೦ನೇ ಜಯಂತಿಯನ್ನು ನಾಮಪಲಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.
ಗ್ರಾ.ಪಂ ಸದಸ್ಯ ಅಂಬಣ್ಣ ಕಡದೊಡ್ಡಿ ಮಾತನಾಡಿದರು. ನೂತನ ಗ್ರಾ.ಪಂ ಸದಸ್ಯರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ವೀರನಗೌಡ ಜಾನೇಕಲ್, ವಜ್ರದಯ್ಯ ನಾಯಕ, ಆಂಜನೇಯ್ಯ ಛಲುವಾದಿ, ಎಂ.ಮಲ್ಲೇಶ ಮಾಚನೂರು, ಬಾಲಪ್ಪ, ವಿಜಯ, ಶಿವಪ್ಪತಾತ, ಭೀಮಪ್ಪಭೋವಿ, ನಾಗಯ್ಯನಾಯಕ, ನಬಿಸಾಬ್,ಬಾಬು, ರಾಮಲಿಂಗಪ್ಪಭೊವಿ, ಸಮೀರ ಪಾಷ, ಬಾಲಾಜಿ ನಾಯಕ, ಮೈಬೂಬುಸಾಬ್, ಶರಣಬಸವ, ಸೇರಿದಂತೆ ಇನ್ನಿತರರು ಇದ್ದರು.