ಡಾ. ಬಿ.ಆರ್.ಅಂಬೇಡ್ಕರ ರವರಿಗೆ ಅವಮಾನ ಕುಲಪತಿಯವರಿಗೆ ಮನವಿ

ಕಲಬುರಗಿ:ಎ.16: ಗುಲಬರ್ಗಾ ವಿಶ್ವವಿದ್ಯಾಲಯದ ವೃತ್ತಿ ನಿರತ ಮಹಿಳೆಯರ ವಸತಿ ನಿಲಯ ಹಾಗೂ ವಿಧ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ರವರ 132ನೇ ಜಯಂತಿ ಆಚರಣೆ ಮಾಡದೆ ಹಾಸ್ಟೆಲ್ ವಾರ್ಡನಗಳು ಬೇಜವಾಬ್ದಾರಿತನ ತೋರಿರುತ್ತಾರೆ. ಎಂದು ಕನ್ನಡಿಗರ ಸೇವಾದಳ ಕಾರ್ಯಕರ್ತರು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಈ ಜಯಂತಿ ಹಬ್ಬವೆಂದು ಆಚರಣೆ ಮಾಡುವ ನಮ್ಮ ಭಾರತ ದೇಶದಲ್ಲಿ ಈ ಕೃತ್ಯ ನೋಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ರವರಿಗೆ ಅವಮಾನ ಮಾಡಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂಧಿಗಳನ್ನು ಕೂಡಲೇ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಿ ಹಾಗೂ ಕೆಲಸದಿಂದ ವಜಾಗೊಳಿಸಬೇಕು. ಒಂದು ವೇಳೆ ಈ ಮನವಿಯನ್ನು ತೀರಸ್ಕರಿಸಿದ್ದಲ್ಲಿ ತಮ್ಮ ಕಛೇರಿಯ ಮುಂದೆ ಸೋಮವಾರ ಏ.17.ರಂದು ಬೆಳಿಗ್ಗೆ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಲಾಗುವುದು ಎಂದು ಕನ್ನಡಿಗರ ಸೇವಾದಳ ಎಚ್ಚರಿಕೆ ನೀಡಿದೆ. ಕನ್ನಡಿಗರ ಸೇವಾದಳದ ರಾಜ್ಯಾಧ್ಯಕ್ಷ ಶರಣಕುಮಾರ ಬಡಿಗೇರ, ಸಂಜೀವಕುಮಾರ ಸಂಗನ್, ವಿಜಯಕುಮಾರ ಎಂ ಧರ್ಮಾಪೂರ, ಗಣೇಶ ಸೇರಿದಂತೆ ಇತರರು ಇದ್ದರು.