ಡಾ.ಬಿ.ಆರ್ ಅಂಬೇಡ್ಕರ ಮೂರ್ತಿ ಸ್ಥಾಪನೆಗೆ ಸಿದ್ದತೆ

ಮಾದನಹಿಪ್ಪರಗಾ ;ಎ.23: ಮಾದನಹಿಪ್ಪರಗಾದಲ್ಲಿಡಾ.ಬಿ.ಆರ್ ಅಂಬೇಡ್ಕರ ಪೂರ್ತಿ ಸ್ಥಾಪಸಲು ಉದ್ದೇಶಿಸಲಾದ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ದಲಿತ ಮುಖಂಡ ಮಹಾದೇವ ಮೋಘಾ ವಿಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು 20 ಲಕ್ಷ ವೆಚ್ಚದಲ್ಲಿ ದೊಡ್ಡದಾದ ಬಾಬಾ ಸಾಹೇಬರ ಮೂರ್ತಿ ಸ್ಥಾಪಿಸಲಾಗುತ್ತಿದೆ. ಇಲ್ಲಿನ ಜನರ ಬಹುದಿನಗಳ ಬೆಡಿಕೆಯಾಗಿತ್ತು ಈಗಾಲೆ ಕೆಲಸ ಮುಗಿಯವುವ ಹಂತ ತಲುಪಿದ್ದು ಸ್ವಲ್ಪ ದಿನಗಳಲ್ಲಿ ಮೂರ್ತಿ ಸ್ಥಾಪನೆ ಕಾರ್ಯ ಅದ್ದುರಿಯಾಗಿ ನಡೆಯಲಿದೆ. ಮೂರ್ತಿ ಸ್ಥಾಪನೆಯಿಂದ ಬಹುದಿನಗಳ ಬೇಡಿಕಗೆ ಈಡೆರಿದಂತೆ ಆಗುತ್ತದೆ ಎಂದರು. ದಲಿತ ಮುಖಂಡರಾದ ರಾಜು ಸಿಂಗೆ ದ್ಯಾವಣ್ಣ ಶವರೆ ಸೋಮನಾಥ ಸಲಗರೆ ಇತರರು ಇದ್ದರು.