ಡಾ.ಬಿ.ಆರ್.ಅಂಬೇಡ್ಕರ ಭವನ ನಿರ್ವಹಣೆ ಜವಾಬ್ದಾರಿ ಯಾರದು?

ಬಾದಾಮಿ, ಏ 5: ಗಂಡ ಹೆಂಡರ ನಡುವೆ ಕೂಸು ಬಡವಾಯಿತಂತೆ ಎಂಬ ನಾಣ್ಣುಡಿ ಅಕ್ಷರಸಃ ಸಮಾಜ ಕಲ್ಯಾಣ ಮತ್ತು ಪುರಸಭೆಗೆ ಅನ್ವಯಿಸುತ್ತದೆ. ನಗರದ ಕೆಇಬಿ ಹತ್ತಿರ ಇರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ವಹಣೆ ಯಾರದು ಎಂದು ಚರ್ಚೆಗೆ ಗ್ರಾಸವಾಯಿತು.
ಅಂಬೇಡ್ಕರ್ ಭವನದ ವಿದ್ಯುತ್ ಬಿಲ್ ರೂ.30 ಸಾವಿರ ಬಾಕಿ ಇದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ಅಂಬೇಡ್ಕರ ಭವನ ಕತ್ತಲಲ್ಲಿದೆ. ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ಸಮಾಜ ಕಲ್ಯಾಣ ಇಲಾಖೆಗೆ ಸಂಬಂದಿಸಿದೆ ಅಂತಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಪುರಸಭೆಗೆ ಸಂಬಂಧಿಸಿದೆ ಅಂತಾರೆ. ಒಬ್ಬರು ಇನ್ನೊಬ್ಬರ ಮೇಲೆ ಬೊಟ್ಟು ತೋರಿಸುತ್ತಾರೆ. ಇದು ಯಾರಿಗೆ ಸಂಬಂಧಿಸಿದೆ. ಅ.14 ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಇರುವ ಈಗ ಅಧಿಕಾರಿಗಳಿಗೆ ನೆನಪಾಗಿದೆ ಎಂದು ದಲಿತ ಸಮಾಜದ ಮುಖಂಡರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.