ಡಾ ಬಿ.ಆರ್.ಅಂಬೇಡ್ಕರ ಅವರ 132 ನೇ ಜಯಂತಿ ಆಚರಣೆ

ಹುಬ್ಬಳ್ಳಿ, ಏ18: ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ ಅವರ 132 ನೇ ಜಯಂತಿಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಲಿಂಗರಾಜ ಸಿ ಮುಳ್ಳಳ್ಳಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ದೇಶ ಕಂಡ ಅಪ್ರತಿಮ ಮಹಾನ ಸಾಧಕರಾದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಧಾರೆಯೆರೆಯಲು ಭಾವಿ ಶಿಕ್ಷಕರಿಗೆ ಕರೆಕೊಟ್ಟರು.
ಪ್ರಶಿಕ್ಷಣಾರ್ಥಿಗಳಾದ ಪೂಜಾ, ಫಕ್ಕಿರಮ್ಮ ಹಾಗೂ ವಿಜಯ ಅವರು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ ಅವರ ಜೀವನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಡರು. ಪ್ರಶಿಕ್ಷಣಾರ್ಥಿಗಳಾದ ಕಮಲಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀಕಾಂತ ಸಭಿಕರನ್ನು ಸ್ವಾಗತಿಸಿದರೆ, ಚನ್ನಬಸವ ವಂದನಾರ್ಪಣೆಯನ್ನು ನೆರೆವೇರಿಸಿಕೊಟ್ಟರು. ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಡಾ ಬಿ ವ್ಹಿ ಹಳೇಮನಿ. ಡಾ. ಜಯಶ್ರೀ ಕುಂದಗೋಳಮಠ, ಉಪನ್ಯಾಸಕರಾದ ಅರ್ಚನಾ ಪೂಜಾರ, ಎಂ,ಬಿ ಸುಪ್ರೀತಾ , ಶಿಬಾ ಕುರಟ್ಟಿ , ಡಾ. ಅನಿಲ ಗುಮಗೋಳ, ವೀರೇಶ ಕಲಕೇರಿ, ಪ್ರದೀಪ ಲಕ್ಷೇಟ್ಟಿ, ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.