
ರಾಯಚೂರು,ಏ.೧೪- ರಾಷ್ಟ್ರೀಯ ಸಮಾಜ ಪರಿವರ್ತನಾ ಸಮಿತಿ ವತಿಯಿಂದ ಇಂದು ಬಾಬಾ ಸಾಹೇಬ್ ಅಂಬೇಡ್ಕರ ರವರ ೧೩೨ನೇ ಜಯಂತತ್ಸೋವವನ್ನು ವಾರ್ಡ್ ನಂಬರ್ ೩೩ರಲ್ಲಿ ಬರುವ ಪೋತಗಲ್ ಗ್ರಾಮದಲ್ಲಿ ಬರುವ ಅಂಬೇಡ್ಕರ್ ವೃತ್ತದಲ್ಲಿ ಸತತವಾಗಿ ೫ನೇ ವರ್ಷ ಅದ್ದೂರಿಯಾಗಿ ಜಿಲ್ಲಾಧ್ಯಕ್ಷರಾದ ಎಂ. ಮಾರೆಪ್ಪ ಅವರ ನೇತೃತ್ವದಲ್ಲಿ ಮಾಡಿದರು.
ಈ ಸಂಧರ್ಬದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಲ್ಲೂರು, ಕಾನೂನು ಸಲಹೆಗಾರರಾದ ಪಿ.ಎಸ್ ವೀರಯ್ಯ ತಾತ ರಾಜ್ಯ ಕಾರ್ಯಕಾರಣಿ ಸದಸ್ಯ ರಾಜಶೇಖರ್, ವಿಭಾಗಿಯ ಅಧ್ಯಕ್ಷ ಶ್ರೀನಿವಾಸ್ ಕೊಪ್ಪರ,ನರಸಿಂಹಲು, ಶಂಶಾವಲಿ, ಎಂ.ಎ.ಟಿ.ಹುಸೇನಪ್ಪ, ಮಲ್ಲೇಶ್, ಸುರೇಶ್, ನಾಗೇಂದ್ರ, ಹೆಚ್ ಕೆ ನಾಗರಾಜ್, ಹುಲಿಗೆಪ್ಪ ಹಾಗೂ ಗ್ರಾಮಸ್ಥರು,ಇನ್ನಿತರರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.