ಡಾ.ಬಿ.ಆರ್.ಅಂಬೇಡ್ಕರ್ ರ ಜೀವನ ಚರಿತ್ರೆ ಪುಸ್ತಕ ವಿತರಣೆ

ಕಲಬುರಗಿ:ಎ.15: ನಗರದ ಜಗತ್ ವೃತ್ತದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪುತ್ತಳಿಯ ಆವರಣದಲ್ಲಿ ಜಯಂತಿ ಪ್ರಯುಕ್ತ ಶುಕ್ರವಾರ ‘ಕಾಯಕಯೋಗಿ ಸೇವಾ ಸಂಸ್ಥೆ’ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಕೇದರನಾಥ ಕುಲಕರ್ಣಿ, ಡಾ.ಸುನೀಲಕುಮಾರ ಎಚ್.ವಂಟಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ಪ್ರೊ.ರಮೇಶ್ ಯಾಳಗಿ, ಬಸವರಾಜ ಎಸ್.ಪುರಾಣೆ, ನೀಲಕಂಠಯ್ಯ ಹಿರೇಮಠ, ಪರಮೇಶ್ವರ ಬಿ.ದೇಸಾಯಿ, ಬಾಬು ಮೌರ್ಯ, ರಾಮಚಂದ್ರ ಕಾರಭೋಸಗಾ, ಅಶೋಕ ಕಾಳೆ ಸೇರಿದಂತೆ ಮತ್ತಿತರರಿದ್ದರು.