ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣ

ಮಾನ್ವಿ,ಮೇ.೨೫- ಸಿರವಾರ ತಾಲೂಕಿನ ಹರವಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟನೆ ನಂತರ ಕಾರ್ಯಕ್ರಮದಲ್ಲಿ ಪಿ,ತಿಪ್ಪಣ್ಣ ಬಾಗಲವಾಡ ಮಾತಾನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಹೊಲೆ ಮಾದಿಗರಿಗೆ ಸೀಮಿತವಾಗದೇ ಈ ದೇಶದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ಯಾರು ತುಳಿತಕ್ಕೆ ಒಳಗಾಗಿದ್ದಾರೆ ಅವರಿಗೆಲ್ಲ ಸಂವಿಧಾನ ರೂಪಿಸಿ ಈ ದೇಶದ ಕಟ್ಟ ಕಡೆಯ ಜನರಿಗೆ ನ್ಯಾಯ ದೊರಕಿಸಿಕೊಟ್ಟ ಮಹಾ ಚೇತನ ಎಂದರು.
ನಂತರ ವಕೀಲರಾದ ಯಲ್ಲಪ್ಪ ಹೀರೆಬಾದರದಿನ್ನಿ ಮಾತನಾಡಿ ಅಂಬೇಡ್ಕರ್ ಅವರು ಸಾವಿರಾರು ಪದವಿಗಳನ್ನು ಪಡೆದು ವಿದೇಶದಲ್ಲಿ ನೌಕರಿ ಮಾಡಿ ತಾವು ಮತ್ತು ತಮ್ಮ ಕುಟುಂಬದ ಸದಸ್ಯರನ್ನು ಸುಖದ ಸಂಪತ್ತಿನಲ್ಲಿ ಇಟ್ಟು ಜೀವನ ನಡೆಸಬಹುದಿತ್ತು ಆದರೆ ನಮ್ಮ ದೇಶದಲ್ಲಿ ಅಸಮಾನತೆಯನ್ನು ಅರಿತುಕೊಂಡು ಅದರ ವಿರುದ್ಧ ಹೋರಾಡಿ ತಮ್ಮ ಕುಟುಂಬದ ಸದಸ್ಯರ ಜೀವ ಹೋದರು ಕೂಡ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ವಿಶ್ವವೇ ತಿರುಗಿನೋಡುವಂತ ಸಂವಿಧಾನ ರಚಿಸಿ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ನೀಡಿದ ಮಹಾನುಭಾವ ಅವರ ಆದರ್ಶಗಳನ್ನು ಪಾಲಿಸಿಕೊಂಡು ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮಾರ್ಗದಲ್ಲಿ ನಡೆದಾಗ ಮಾತ್ರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡ ಕನಸು ನನಸಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಬಸ್ಸಪ್ಪ ಮೇಸ್ತ್ರಿ,ಅರ್ಜುನಪ್ಪ ಜಾನೇಕಲ್, ಅಬ್ರಾಹಂ ಹೊನ್ನಟಗಿ, ಕೆ.ನಾಗಲಿಂಗಸ್ವಾಮಿ, ಶಿವರಾಜ್ ಉಮಳಿಹೊಸೂರು, ಹನುಮಂತ ಮರಾಠ, ಶಿವರಾಜ್ ನಾಯಕ ಹರವಿ, ಲಕ್ಷ್ಮಣ್ ಜಾನೇಕಲ್, ದಲಿತ ಸಂಘರ್ಷ ಸಮಿತಿ ಭೀಮ ಬಣದ ರಾಜ್ಯಾಧ್ಯಕ್ಷ ಹನುಮಂತ ಸೀಕಲ್, ಸೇರಿದಂತೆ ಅನೇಕರು ಇದ್ದರು.