ಡಾ. ಬಿ.ಆರ್. ಅಂಬೇಡ್ಕರ್ ತತ್ವ ಆದರ್ಶ ಮೈಗೂಡಿಸಿಕೊಳ್ಳಿ

filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5138889, 0.540625);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 42;

ಹುಮನಾಬಾದ್ :ಏ.21: ಸಮಾಜದ ಸಮಾನತೆಗೆ ಹೋರಾಡಿದ ಮಹಾನ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಆದರ್ಶಗಳು ಎಲ್ಲರೂ ಪಾಲಿಸಬೇಕು ಎಂದು ಭೀಮ್ ಆರ್ಮಿ ತಾಲೂಕಾಧಕ್ಷ ಅನಿಲ್ಲಿ ದೊಡ್ಡಿ ಹೇಳಿದರು.

ತಾಲೂಕಿನ ಕಠಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಕಂಡ ಕನಸಿನಂತೆ ಇಂದಿನ ಯುವ ಪೀಳಿಗೆಗಳು ನಿರಂತರ ಅಧ್ಯಯನ ಮಾಡುವ ಮೂಲಕ ಉತ್ತಮ ಸಾಧನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರತಿಮೆಯ ಮುಂದೆ ನಿಂತು ಯುವಕ, ಯುವತಿಯರು, ಕುಟುಂಬ ಸದಸ್ಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಪುರುಷ ಮತ್ತು ಮಹಿಳಾ ಭಜನಾ ಮಂಡಳಿಗಳು ಭೀಮ ಗೀತೆ, ಅಂಬೇಡ್ಕರ್ ಜೀವನ ಚರಿತ್ರೆಯ ಗೀತ ಗಾಯನ ಸುಧೆ ಹರಿಸಿದರು. ಗಾಯನಕ್ಕೆ ಮೆಚ್ಚಿ ನೀಡಿದರು.

ಯುವಕರ ನಾನಾ ತಂಡಗಳು ತಂಡೋಪತಂಡವಾಗಿ ಡಿ.ಜೆ. ಸಂಗೀತಕ್ಕೆ ಕುಣಿದು ಸಂಭ್ರಮಿಸಿದರು. ಕುಣಿತದೊಂದಿಗೆ ಮುಂದೆ ಸಾಗುತ್ತಿದ್ದಂತಯೇ ಅಂಬೇಡ್ಕರ್ ಅವರ ಭಾವಚಿತ್ರಗಳು, ಮೂರ್ತಿಗಳು ಹಿಂದೆಯೇ ಸಾಗಿದವು. ಈ ವೇಳೆ ‘ಜೈ ಜೈ ಜೈ ಭೀಮ್’ ಘೋಷಣೆಗಳು ಅನುರಣಿಸಿದವು.

ಈ ಸಂದರ್ಭದಲ್ಲಿ ಶಿವರಾಜಪ್ಪ ಪಾಟೀಲ್, ವೀರಭದ್ರಪ್ಪ ಪಾಟೀಲ್, ವೆಂಕಟರಡ್ಡಿ, ಬಸವರಾಜ್ ಪಾಟೀಲ್, ರಾಜಕುಮಾರ್ ಭೂತಾಳೆ ,ಈಶ್ವರ ಕ್ರಾಂತಿ, ಚಿದಂಬರ ಚಳಕೇರಿ, ಜಗನ್ನಾಥ್ ನವಲಿ ಬಸವರಾಜ ಭೂತಾಳೆ ಕಲ್ಲಪ್ಪ ದೊಡ್ಡಿ, ಆಕಾಶ ದೊಡ್ಡಿ,ಧರ್ಮಣ್ಣ ದೊಡ್ಡಿ, ಮಹೇಶ ನವಲಿ , ಇದ್ದರು.