ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಕಲಬುರಗಿ:ಏ.14: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ರಾಷ್ಟೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹ ರಾಜ ನಿರಗುಡಿಯವರು ಸಮಿತಿಯ ಮುಖಂಡರೊಂದಿಗೆ ಮುಂಬೈನ ದಾದರನ ಚೈತ್ಯ ಭೂಮಿಲ್ಲಿರುವ ಡಾ. ಬಿ .ಆರ್. ಅಂಬೆಡ್ಕರ ಅವರ ‘ಸ್ಮಾರಕಕ್ಕೆ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು,
ನಂತರ ಮುಂಬೈ ನ ಶಿವಮಂದಿರ ಹವಾ ಮಲ್ಲಿನಾಥ ಮಹಾರಾಜ್ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಡಾ. ಬಿ. ಆರ್ .ಅಂಬೇಡ್ಕರ್ ಅವರ 132 ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜ ನಿರಗುಡಿ ಅವರು ಬುದ್ಧ, ಬಸವ, ಅಂಬೇಡ್ಕರ್ ಹಾಗು ಶಿವಾಜಿ ಮಾಹ ರಾಜ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ದೇಶ ಬಾಂಧವರು ಪ್ರಸ್ತುತ ಪರಿಸ್ಥಿತಿಯಲ್ಲಿ ಜಾತಿ ವಿಚಾರ, ಧರ್ಮದ ವಿಚಾರ ಮಾಡದೆ ಪ್ರ ಪ್ರಥಮವಾಗಿ ದೇಶದ ವಿಚಾರ ಮಾಡಬೇಕೆಂದು ಸಮಸ್ತ ದೇಶ ಬಾಂಧವರಿಗೆ ಕರೆ ನೀಡಿದರು , ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ , ಗುಜರಾತ, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಚಿಂತಕರು ಡಾ. ಬಿ .ಆರ್ . ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿದರು ಇದೇ ಸಂದರ್ಭದಲ್ಲಿ ಪೂಜ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸತ್ಕರಿಸಿ ಗೌರವಿಸಿದರು, ಈ ಒಂದು ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ರಾಜ್ಯಗಳಿಂದ ದೇಶ ಬಾಂಧವರು ಭಾಗವಹಿಸಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ದೇಶ ಬಾಂಧವರಿಗೆ ಸಮಿತಿ ವತಿಯಿಂದ ಅಚ್ಚುಕಟ್ಟಾದ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು ವಿಶೇಷವಾಗಿ ದಕ್ಷಿಣ ಭಾರತ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು, ಈ ಕಾರ್ಯಕ್ರಮದ ಸ್ವಾಗತ ಭಾಷಣ ಮುಖಂಡರಾದ ದಾಸರಾವ ಹಂಬಾರಡೆ, ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿ ವೈಜನಾಥ ಎಸ್ ಝಳಕಿ ಹಳಿದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮೋಹನ ಹರಡೆ ಮುಂಬೈ , ವಿದ್ಯಾ ಭಾವಕರೆ, ಪ್ರಕಾಶ್ ವಾಂಗೆ, ಅಕ್ಲುವರ್ ನಾಂದೇಡ್ , ಸುಪ್ರಿಯಾ ಜಗಡೇ , ಪ್ರಭಾಕರ್ ರಾವ್, ಬಾಲಾಜಿ ಬಿರಾದಾರ್ ಲಾತೂರ್, ಸಮಿತಿಯ ಪ್ರಮುಖ ಮುಖಂಡರಾದ ಮಲ್ಲಿಕಾರ್ಜುನ ಸಾರವಾಡ, ಸಂದೇಶ ಪವಾರ್, ಪಪ್ಪು ಪಾಟೀಲ್ ಭಾಲ್ಕಿ, ರಾಜಶೇಖರ್ ರೆಡ್ಡಿ ಸೇಡಂ , ರಾಜು ಭವಾನಿ, ಸಿಧಾರ್ಥ ತಲವಾರೆ, ಸಂತೋಷ ಅಲ್ಡೆ, ಅರುಣ್ ಬಬಲಾದಕರ್ , ಉಮೇಶ್ ನಡಿಗೇರಿ, ಮಲ್ಲು ಚೆಲಗೇರಿ, ಸಂತೋಷ ಅಣುರ, ರೇವಪ್ಪಾ ಮಮದಾಪುರ, ಶಿವಾಜಿ , ನಾಗರಾಜ ವಿರಾರ, ಬಸವರಾಜ ಡಾಂಗೆ ಸೆರಿದಂತೆ ಅನೇಕ ಮುಖಂಡರು ಹಾಜರಿದ್ದರು .