ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.14: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ನಗರದ ಕೋರ್ಟ್ ಮುಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿ ಹತ್ತಿರ ಆಚರಿಸಲಾಯಿತು. ಈ ವೇಳೆ ಡಾ.ಶಿವುಕುಮಾರ ಮಾಲೀಪಾಟೀಲ್ ಅವರು ಬರೆದಿರುವ “ನನ್ನ ಮತ ಮಾರಾಟಕ್ಕಿಲ್ಲ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. 
ಈ ವೇಳೆ ಎ.ಸಿ ಬಸವಣ್ಣೆಪ್ಪ ಕಲಶೇಟ್ಟಿ, ಪೌರಾಯುಕ್ತ ವಿರುಪಾಕ್ಷಮೂರ್ತಿ, ತಹಶೀಲ್ದಾರ್ ಮಂಜುನಾಥ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ವೈದ್ಯರಾದ ಡಾ.ಶಿವುಕುಮಾರ ಮಾಲಿಪಾಟೀಲ್, ಡಿವೈಎಸ್ಪಿ ಎಚ್.ಶೇಖರಪ್ಪ ಸೇರಿದಂತೆ ಅನೇಕ ಮುಖಂಡರು ಅಧಿಕಾರಿಗಳು ಇದ್ದರು.