ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಮೂರ್ತಿ ಅನಾವರಣ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.14: ಶಾಸಕರಾದ ಪರಣ್ಣ ಮುನವಳ್ಳಿ ಮತ್ತು ಬಸವರಾಜ ದಢೇಸೂಗೂರು ಅವರ ನೇತೃತ್ವದಲ್ಲಿ ದಲಿತ ಸಮುದಾಯದ ಎರಡು ಸಮಾಜದ ಮುಖಂಡರಲ್ಲಿ ಉಂಟಾಗಿದ್ದ ಭಿನ್ನಮತವನ್ನು ಶಮನಗೊಳಿಸಿ ಮುಸುಕು ಹಾಕಿ ನಿಲ್ಲಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.
ಶಾಸಕರ ನೇತೃತ್ವದಲ್ಲಿ ದಲಿತ ಸಮುದಾಯದ ಮುಖಂಡರು ಸೇರಿ ಡಾ|| ಬಿ.ಆರ್ ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿದರು. ಕಳೆದ ನಾಲ್ಕೈದು ತಿಂಗಳಿ ಹಿಂದೆ ದಲಿತ ಸಮುದಾಯದ ಮುಖಂಡರು ಅಂಬೇಡ್ಕರ್ ಅವರ ಕಂಚಿನ ಮೂರ್ತಿಯನ್ನು ತಂದು ನ್ಯಾಯಾಲಯದ ಮುಂದಿನ ವೃತ್ತದಲ್ಲಿ ಸ್ಥಾಪನೆ ಮಾಡಿದ್ದರು. ಕೆಲವರಲ್ಲಿ ಬಿನ್ನಾಭಿಪ್ರಾಯ ಉಂಟಾಗಿ  ಮೂರ್ತಿ ಅನಾವರಣ ಮಾಡದೇ ಹಾಗೇ ನಿಲ್ಲಿಸಲಾಗಿತ್ತು. ಇಬ್ಬರು ಶಾಸಕರು ನೇತೃತ್ವದಲ್ಲಿ ಭಿನ್ನಮತವನ್ನು ಶಮನಗೊಳಿಸಿ ಮೂರ್ತಿಯನ್ನು ಅನಾವರಣ ಗೊಳಿಸಿದರು. ನಂತರ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಎಲ್ಲರೂ ಒಂದಾಗಿ ಡಾ|| ಬಿ ಆರ್ ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿರುವುದು ಸಂತಸದ ವಿಷಯವಾಗಿದೆ. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಕೆಲಸ ಮಾಡೋಣ, ಮೂರ್ತಿ ಸ್ಥಾಪನೆಗೆ ಹಲವಾರು ಶ್ರಮಮಿಸಿದ್ದಾರೆ ಎಲ್ಲರ ಸಹಕಾರದಿಂದ ಇಂದು ಮೂರ್ತಿ ಅನಾವರಣಗೊಳಿಸಲಾಗಿದೆ ಎಂದರು. ಈ ವೇಳೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಶೇಟ್ಟಿ, ಹನುಮಂತಪ್ಪ ನಾಯಕ, ಜೋಗದ ನಾರಾಯಣಪ್ಪ ನಾಯಕ, ಹುಸೇನಪ್ಪ ಮಾದಿಗ, ಮರಿಯಪ್ಪ ಕುಂಟೋಜಿ, ಸಂತೋಷ ಕೆಲೋಜಿ, ವೆಂಕಟೇಶ ಅಮರಜ್ಯೋತಿ, ಹುಸೇನಪ್ಪ ಹಂಚಿನಾಳ, ಸಂಗಪ್ಪ ಚಲುವಾದಿ ಸೇರಿದಂತೆ ಅನೇಕರು ಇದ್ದರು.