ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ

ರಾಯಚೂರು,ಡಿ.೦೭-ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ, ನಿಯಮಗಳ ಅನುಷ್ಠಾನಕಾರ, ಸಮಾನತೆಯ ಹರಿಕಾರ, ಮೀಸಲಾತಿ ನೀಡಿಕೆ, ಜಾತಿ ಪದ್ಧತಿ ನಿರ್ಮೂಲನೆ ಹೀಗೆ ಸಾಕಷ್ಟು ಅವರ ವಿಚಾರ, ಸಮಾಜ ಸುಧಾರಣೆ, ಸಾಮಾಜಿಕ ಸಿದ್ಧಾಂತಗಳನ್ನು ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಬದಲಾವಣೆ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಹಾಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಅರ್.ಅಂಬೇಡ್ಕರ್ ಅವರ ೬೫ ನೇ ಪರಿನಿರ್ವಾಣ ದಿನವಾದ್ದರಿಂದ ಅವರ ಬಾವಚಿತ್ರಕ್ಕೆ ವಿವಿಯ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರರ ಬೋಧನೆಗಳು, ಸಂದೇಶಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಅಭ್ಯಸಿಸುವುದು, ಅವಲೋಕಿಸುವುದು, ವಿಮರ್ಶಿಸುವುದು ಅಗತ್ಯವಾಗಿದೆ ಎಂದರು
ರಾಯಚೂರು ವಿವಿ ಕುಲಸಚಿವ ಪ್ರೊ.ವಿಶ್ವನಾಥ ಎಂ. ಮಾತನಾಡಿ, ಭಾರತರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರನ್ನು ಕಾನೂನಿನ ಕಣ್ಣಿನಿಂದ ನೋಡುವುದು, ಅವರು ಕೊಟ್ಟಂತಹ ಹಕ್ಕು, ನ್ಯಾಯಿಕ ನಿಯಮಗಳು, ಪೌರತ್ವ ಇವೆಲ್ಲ ಅವರ ನೆನೆಯುವುದು ಅವರ ವಿಚಾರಗಳ ಮನವರಿಕೆ, ಸ್ಮರಣೆ, ಪರಿನಿರ್ವಾಣ ಭಾರತ ಸಂವಿಧಾನ ನೆನಪಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ವಿವಿ ವಿತ್ತಾಧಿಕಾರಿ ಪ್ರೊ.ಪಾರ್ವತಿ ಸಿ.ಎಸ್., ಉಪಕರಣಾತ್ಮಕ ತಂತ್ರಜ್ಞಾನ ವಿಭಾಗ ಪ್ರಾಧ್ಯಾಪಕ ಪ್ರೊ.ಪಿ.ಭಾಸ್ಕರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಪ್ರೊ.ನುಸ್ರತ್ ಫಾತೀಮಾ, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ವಾಸುದೇವ ಜೇವರ್ಗಿ ಉಪಸ್ಥಿತರಿದ್ದರು. ಸಹಾಯಕ ಗ್ರಂಥಪಾಲಕ ಡಾ.ಜಿ.ಎಸ್.ಬಿರಾದಾರ್ ವಂದಿಸಿದರು. ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ನಮನ ಸಲ್ಲಿಸಿದರು.