ಡಾ.ಬಿ ಆರ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಿ : ರೂಪಾ ಕಾಂಬಳೆ

ಅಥಣಿ :ಜ.2: ಶ್ರೇಷ್ಠ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ತತ್ವವನ್ನು ಅಳವಡಿಸಿ ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ದೆuಟಿಜeಜಿiಟಿeಜರಕಿಸಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ವಿಶ್ವಜ್ಞಾನಿ ಹಾಗೂ ವಿಶ್ವ ನಾಯಕರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ದರೂರ ಜಿಪಂ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ಸಮಾಜ ಸೇವಕಿ ರೂಪಾ ಕಾಂಬಳೆ ಹೇಳಿದರು
ಅವರು ತಾಲೂಕಿನ ಖವಟಕೊಪ್ಪ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ನಗರದಲ್ಲಿ ನಿರ್ಮಿಸಿರುವ ಡಾ. ಬಿ ಆರ್ ಅಂಬೇಡ್ಕರ್ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಂಬೇಡ್ಕರ್ ಅವರು ಇಡೀ ಜಗತ್ತು ಮೆಚ್ಚುವಂತಹ ಸಂವಿಧಾನವನ್ನು ನೀಡಿದ್ದು, ಆ ಮೂಲಕ ಭಾರತದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ತಂದು ಕೊಟ್ಟಿದ್ದಾರೆ. ಅವರ ಜೀವನದಲ್ಲಿ ಬಡತನ ಹಾಗೂ ಅಸ್ಪೃಶ್ಯತೆ ಎರಡು ಕಾಡಿದ್ದವು. ಅದೆಲ್ಲವನ್ನೂ ಮೆಟ್ಟಿನಿಂತು ಸಾಧನೆ ಮಾಡಿ ಇಂದು ಚರಿತ್ರೆಯಲ್ಲಿ ಅಜರಾಮರರಾಗಿ ಉಳಿದಿದ್ದಾರೆ ಎಂದ ಅವರು ಅಂಬೇಡ್ಕರ್ ತಮ್ಮ ಬದುಕನ್ನು ಹೋರಾಟದಲ್ಲೇ ಕಳೆದು ನಮಗೆ ಸಮಾನತೆ ನೀಡದೇ ಇದ್ದಿದ್ದರೆ, ಇಂದು ಸಮಾನತೆ ಸಾಧ್ಯವಾಗುತ್ತಿರಲಿಲ್ಲ. ಅಂದು ಅವರ ಬದುಕಿನ ಹೋರಾಟ ತ್ಯಾಗ ಇಂದು ನಮ್ಮೆಲ್ಲರ ಗೌರವದ ಬದುಕಿಗೆ ಮುನ್ನುಡಿ ಬರೆದಿದೆ ಎಂದರು
ಈ ಸಂದರ್ಭದಲ್ಲಿ ಉಮೇಶ ಕಾಂಬಳೆ. ನರಸು ಕಾಂಬಳೆ. ಸರದಾರ ಶಿವು ಕಾಂಬಳೆ. ಕರಣ ಕಾಂಬಳೆ. ಆಕಾಶ್ ಕಾಂಬಳೆ. ವಿನೋದ್ ಕಾಂಬಳೆ. ಪ್ರಮೋದ್ ಕಾಂಬಳೆ. ದಯಾನಂದ್ ಡಿಕೆ. ಸವಿತಾ ಕಾಂಬಳೆ. ಕುಸುಮಾ ಕಾಂಬಳೆ. ಕವಿತಾ ಮಾದರ. ಮದುಮತಿ ಕಾಂಬಳೆ. ಚಂದ್ರವ್ವಾ ಸರಿಕರ. ಸೇರಿದಂತೆ ಹಲವರು ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.