ಡಾ.ಬಿ.ಆರ್.ಅಂಬೇಡ್ಕರ್ ಅವರು ಅಪ್ರತಿಮ ಚಿಂತಕ, ದಾರ್ಶನಿಕ: ಡಾ.ಬಸವರಾಜ ಬಲ್ಲೂರು

ಬೀದರ ಜ. 12: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಹಾಗೂ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬೀದರ ಇವರ ಸಂಯುಕ್ತಾಶ್ರಯದಲ್ಲಿ “ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ ಓದು ಕಾರ್ಯಕ್ರಮ”ವು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೀದರನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ ಅವರು ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ ಅವರು ಇಡೀ ವಿಶ್ವ ಕಂಡ ಶ್ರೇಷ್ಠ ಜ್ಞಾನಿಯಾಗಿದ್ದಾರೆ. ಅವರು ನಮ್ಮ ದೇಶದಲ್ಲಿ ಜನಿಸಿರುವುದು ಭಾರತೀಯರ ಪುಣ್ಯ ಎಂದು ತಿಳಿಸಿದರು.
ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಬಸವರಾಜ ಬಲ್ಲೂರ ಅವರು ವಿಶೇಷ ಉಪನ್ಯಾಸ ನೀಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸುತ್ತಿರುವ ಅಂಬೇಡ್ಕರ ಓದು ಕಾರ್ಯಕ್ರಮ ಅದು ಕೇವಲ ಅಂಬೇಡ್ಕರ ಓದು ಅಲ್ಲ, ಅದು ಪ್ರಜಾಪ್ರಭುತ್ವದ ಓದು ಕಾರ್ಯಕ್ರಮ. ಅಂಬೇಡ್ಕರ್ ಅವರು ಅಪ್ರತಿಮ ಚಿಂತಕ, ದಾರ್ಶನಿಕರಾಗಿದ್ದಾರೆ ಎಂದು ತಿಳಿಸಿದರು.
ಇಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರತವಾಗಿ ಓದುವುದನ್ನೆ ಮರೆತಿದ್ದಾರೆ. ಡಾ.ಅಂಬೇಡ್ಕರರು ಅಂದಿನ ಸಂದರ್ಭದಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಸತತವಾಗಿ ಅಧ್ಯಯನ ಮಾಡಿ ಸಂವಿಧಾನ ಶಿಲ್ಪಿ ಎನಿಸಿಕೊಂಡರು. ಆದರೆ ಇಂದು ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟರೂ ಪುಸ್ತಕ ಓದದೇ ದಾರ್ಶನಿಕರ ಬಗ್ಗೆ ತಿಳಿದುಕೊಳ್ಳದೇ ಬರಿ ಮೊಬೈಲನಲ್ಲಿಯೇ ಕಾಲಹರನ ಮಾಡಿ ತಮ್ಮ ಅಮೂಲ್ಯವಾದ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಮಕ್ಕಳು ಅವಿರತ ಶ್ರಮದಿಂದ ಅಧ್ಯಯನ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಕಲೆ ಸಾಹಿತ್ಯ ಮತ್ತು ಸಂಸ್ಕøತಿ ಅಭ್ಯುದಯಕ್ಕಾಗಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶಿವಶಂಕರ ಟೋಕರೆ ಮಾತನಾಡಿ, ಕಷ್ಟದ ಸಂದರ್ಭದಲ್ಲಿಯೂ ಅಂಬೇಡ್ಕರರು ಓದಿ ದೇಶಕ್ಕೆ ಮಾದರಿಯಾಗಿದ್ದಾರೆ. ಇಂದು ಶ್ರೀಮಂತಿಕೆ ಹಾಗೂ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳು ಸೋಮಾರಿಗಳಾಗುತ್ತಿರುವುದು ದುರಂತ. ಮಕ್ಕಳು ಕೇವಲ ಪ್ರಮಾಣ ಪತ್ರಕ್ಕಾಗಿ ಓದದೇ ಜ್ಞಾನಾರ್ಜಗೆಗಾಗಿ ಓದಬೇಕು ಪ್ರಾಯೋಗಿಕವಾಗಿ ಓದಬೇಕು ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ, ವಿಜಯಕುಮಾರ ಗೌರೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಲಿಪ ಕಾಡವಾದ ಸಂಗಡಿಗರಿಂದ ನಾಡಗೀತೆ ಮತ್ತು ಕ್ರಾಂತಿಗೀತೆಗಳ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಯೋಗೇಶ ಮತ್ತು ತಂಡ ಜಾನಪದ ಗೀತೆಗಳನ್ನು ನಡೆಸಿಕೊಟ್ಟರು.
ಡಾ.ಬಿ.ಆರ್.ಅಂಬೇಡ್ಕರ ಅವರ ಬದುಕು ಮತ್ತು ಬರಹ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಲೋಕೇಶ ರತಿಕಾಂತ, ದ್ವೀತೀಯ ಬಹುಮಾನವನ್ನು ಸಂಜುಕುಮಾರ, ತೃತೀಯ ಗಣಪತಿಗೊಂಡ ಶ್ರೀಪತಿ ಇವರಿಗೆ ವಿತರಿಸಲಾಯಿತು. ಸಮಾಧನಕರ ಬಹುಮಾನವನ್ನು ಪ್ರವೀಣ ಚಂದ್ರಕಾಂತ ಇವರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಕಾಶ ಜನವಾಡಕರ್, ಬಾಬು ಪ್ರಭಾಜಿ, ರಮೇಶ ಪೂಜೇರಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.