ಡಾ.ಬಿ.ಆರ್ ಅಂಬೇಡ್ಕರರ 132ನೇ ಜಯಂತಿ ಆಚರಣೆ

ತಾಳಿಕೋಟೆ:ಎ.15: ದೇಶಕ್ಕೆ ಬಾಬಾ ಸಾಹೇಬ ಅಂಬೇಡ್ಕರ ಕೊಡುಗೆ ಅನನ್ಯವಾಗಿದ್ದು. ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅಂಬೇಡ್ಕರ ಆದರ್ಶ ಮತ್ತು ತತ್ವಗಳನ್ನು ಬಿತ್ತುವಂತಹ ಕಾರ್ಯ ವಾಗಬೇಕಿದೆ ಎಂದು ತಾಲೂಕಾ ತಹಶಿಲ್ದಾರ ಕೀರ್ತಿ ಚಾಲಕ ಅವರು ತಿಳಿಸಿದರು.

   ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿಗೆ ಸಮಾಜ ಬಾಂದವರ ಜೊತೆಗೂಡಿ ಮಾಲಾರ್ಪಣೆ ಮಾಡಿ ನಂತರ ತಾಲೂಕು ಕಚೇರಿ ಸಭಾಭವನದಲ್ಲಿ ತಾಲೂಕಾ ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ 132ನೇ ಜಯಂತಿ ಆಚರಣೆಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಡಾ. ಬಾಬಾ ಸಾಹೇಬ ಅಂಬೇಡ್ಕರ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಪಾಂಡಿತ್ಯವನ್ನು ಪಡೆದ ಮಹಾನ ಮೇಧಾವಿ ಎಂದು ತಿಳಿಸಿದರು.
     ಈ ಸಮಯದಲ್ಲಿ ಮುಖಂಡರುಗಳಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪುರಸಭಾ ಸದಸ್ಯ ಮುತ್ತಪ್ಪ ಚಮಲಾಪುರ, ಬಸವರಾಜ ಕಟ್ಟಿಮನಿ, ಮಹೇಶ ಚಲವಾದಿ, ನಾಗೇಶ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಕಾರ್ತಿಕ ಕಟ್ಟಿಮನಿ, ಜೈಭೀಮ ಮುತ್ತಗಿ, ಕಾಶಿನಾಥ ಕಾರಗನೂರ, ಗೋಪಾಲ ಕಟ್ಟಿಮನಿ, ಮಾಳಪ್ಪ ಮಾಳಳ್ಳಿ, ದೇವೇಂದ್ರ ಹಾದಿಮನಿ, ಸಿದ್ದಪ್ಪ ಚಮಲಾಪೂರ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಚಿನ್ನುದನಿ ನಾಡಗೌಡ, ತಾಪಂ ಇಓ ಬಸವಂತ್ರಾಯಗೌಡ ಬಿರಾದಾರ, ಪಿ.ಎಸ್.ಐ ಸುರೇಶ ಮಂಟೂರ, ಸಿಬ್ಬಂದಿ ವರ್ಗದವರಾದ ಜಗದೀಶ ಜೈನಾಪುರ, ಶೈಲಾ ಕಾಂಚಾಣಿ, ಎಂ.ಎಂ. ಅತ್ತಾರ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಎಸ್.ಎಂ.ಭಾಸಗಿ, ಎಸ್.ಎಂ.ಕಲ್ಬುರ್ಗಿ, ಯಲ್ಲಪ್ಪ ಹೊಸಮನಿ, ಎನ್.ವ್ಹಿ.ಕೋರಿ, ನವೀನ ಇಜೇರಿ, ಮಂಜುನಾಥ ನರಸಣಗಿ, ನಾಗರಾಜ ಗುಡಗುಂಟಿ, ರಾಮನಗೌಡ ಭಂಟನೂರ, ಶ್ರೀನಿವಾಸ ಅಂಗಡಿ, ಅನ್ನಪೂರ್ಣಾ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಮೊದಲಾದವರು ಭಾಗವಹಿಸಿದ್ದರು.