ಡಾ.ಬಿ.ಆರ್.ಅಂಬೆಡ್ಕರ್ ಪುತ್ಥಳಿ ಪ್ರತಿಷ್ಠಾಪನೆಗೆ ಸ್ಥಳ ಒದಗಿಸುವಂತೆ ಮನವಿ ಅರ್ಜಿ”


ಸಂಜೆವಾಣಿ ವಾರ್ತೆ
ಸಿರಿಗೇರಿ ನ16. ಗ್ರಾಮದ ಎಪಿಎಂಸಿ ಹತ್ತಿರದ ಓವರ್ ನೀರಿನ ಟ್ಯಾಂಕ್ ಹತ್ತಿರ ಡಾ.ಬಿ.ಆರ್.ಅಂಬೆಡ್ಕರ್ ಮೂರ್ತಿ ಪ್ರತಿಷ್ಠಾಪಿಸಲು ಸ್ಥಳ ಒದಗಿಸಬೇಕೆಂದು ಸ್ಥಳೀಯ ಕೆಲ ಸಾರ್ವಜನಿಕರಿಂದ ಗ್ರಾಮಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ ಬಳ್ಳಾರಿ ರಸ್ತೆಯ 1ನೇವಾರ್ಡು, ಎಪಿಎಂಸಿ ಹತ್ತಿರದ ವಾಟರ್‍ಟ್ಯಾಂಕ್ ಮುಂಬಾಗದ ಖಾಲಿ ಜಾಗದಲ್ಲಿ ಅಂಬೆಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬೇಕೆಂದು, ಊರಿನ ಸಮಸ್ತ ನಾಗರಿಕರು, ವಿವಿಧ ಸಂಘಟನೆ ಮುಖಂಡರು ಈ ಮೂಲಕ ಕೋರಲಾಗಿದ್ದು, ಅಂಬೆಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳ ಮಂಜೂರು ಮಾಡಬೇಕೆಂದು ಕೋರಲಾಗಿದೆ. ಕರವೇ ಗ್ರಾಮ ಘಟಕದ ಅಧ್ಯಕ್ಷ ಎನ್.ವಿರುಪಾಕ್ಷಿ, ಕೆ.ಶಿವರಾಜ, ಜಿ.ಈರಣ್ಣ, ಎಚ್.ವೀರೇಶ, ಎ.ಮುದಿಯಪ್ಪ, ಮಂಜುನಾಥ, ಶೇಕಣ್ಣ, ಹಮಾಲಿ ನಾಗರಾಜ, ದೊಡ್ಡಬಸಪ್ಪ, ಅಯ್ಯಪ್ಪ, ಕರಿಬಸಪ್ಪ, ವೀರಪ್ಪ, ಇತರರು ಮನವಿ ಪತ್ರವನ್ನು ಸಲ್ಲಿಸಿದರು. ಬಿಲ್‍ಕಲೆಕ್ಟರ್ ಬಿ.ರುದ್ರೇಶ್, ಎಚ್.ಹುಲುಗಪ್ಪ ಇವರು ಮನವಿ ಪತ್ರ ಸ್ವೀಕರಿಸಿದರು.