ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ಶಹಾಪುರ:ಎ.6: ನಗರದ ಶಾಸಕರ ಕಾರ್ಯಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಧೀಮಂತ ನಾಯಕ, ದಲಿತರ ಸಶಕ್ತ ದನಿಯಾಗಿದ್ದ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಶಿವಶರಣ ಇಟಗಿ, ಮುನಿಯಪ್ಪ ಸಾಹು ರಾಮಣ್ಣ ಸಾದ್ಯಾಪುರ, ಮೌನೇಶ ನಾಟೇಕರ್, ಅಜೀಮ್ ಜಮಾದಾರ, ಶಾಂತಕುಮಾರ ಪಾಟೀಲ್, ಲಕ್ಷ್ಮಣ ದೇವಿನಗರ, ಭೀಮರಾಯ ಜುನ್ನಾ, ಸಿದ್ದಣ್ಣ ಕನ್ಯಾಕೊಳ್ಳರ, ಮುನಿರತ್ನ ಸಾಹು, ನಾಗು ದೇವಿನಗರ, ಸುನೀಲ ಕನ್ಯಾಕೊಳ್ಳುರ ಸೇರಿದಂತೆ ಇತರರು ಇದ್ದರು.