ಡಾ.ಬಾಬು ಜಗಜೀವನರಾಮ ಅವರ ಜಯಂತಿ ಆಚರಣೆ

ತಾಳಿಕೋಟೆ:ಎ.6: ಪಟ್ಟಣದ ತಹಶಿಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ ಅವರ 116ನೇ ಜಯಂತ್ಯೋತ್ಸವವನ್ನು ಬುಧವಾರರಂದು ಸರಳ ರೀತಿಯಿಂದ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಡಾ.ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ತಾಲೂಕಾ ತಹಶಿಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ ಅವರು ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಗೌರವಿಸಿದರು.

ಈ ಸಮಯದಲ್ಲಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ, ಕ್ಷೇತ್ರಶಿಕ್ಷಣಾಧಿಕಾರಿ ನಾಯಕ, ಕೃಷಿ ಇಲಾಖೆಯ ಬಿಳಗಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಎಸ್.ಎಂ.ಭಾಸಗಿ, ಎಸ್.ಎಂ.ಕಲ್ಬುರ್ಗಿ, ಯಲ್ಲಪ್ಪ ಹೊಸಮನಿ, ಎನ್.ವ್ಹಿ.ಕೋರಿ, ನವೀನ ಇಜೇರಿ, ಮಂಜುನಾಥ ನರಸಣಗಿ, ನಾಗರಾಜ ಗುಡಗುಂಟಿ, ರಾಮನಗೌಡ ಭಂಟನೂರ, ಶ್ರೀನಿವಾಸ ಅಂಗಡಿ, ಅನ್ನಪೂರ್ಣಾ ಪಾಟೀಲ, ಸಮಾಜದ ಮುಖಂಡರಾದ ಮುತ್ತಪ್ಪಣ್ಣ ಚಮಲಾಪೂರ, ರಾಮಣ್ಣ ಕಟ್ಟಿಮನಿ, ಸುಭಾಸ ಗುಂಡಕನಾಳ, ಗೋಪಾಲ ಕಟ್ಟಿಮನಿ, ಬಸ್ಸು ಮಾದರ, ಯಲ್ಲಪ್ಪ ಶಿರೋಳ, ಸಂಗಪ್ಪ ಮಾದರ, ಕಾಶಿನಾಥ ಮಂಬ್ರುಮಕರ, ಪರಶುರಾಮ ಹೊಟಗಾರ, ದುರ್ಗೇಶ ಮಿಣಜಗಿ, ಪರಸುರಾಮ ತುಂಬಗಿ, ಯಮನಪ್ಪ ನಾಯ್ಕೋಡಿ, ವಿಜೇಂದ್ರ ವಿಜಾಪೂರ, ರಾಜು ವಿಜಾಪೂರ, ಶ್ರೀಧರ ಗಂಜಿನಾಳ, ವಿವಿಧ ಇಲಾಖೆಯ ಅಧಿಕಾರಿವರ್ಗದವರು ಪಾಲ್ಗೊಂಡಿದ್ದರು.