ಡಾ.ಬಾಬು ಜಗಜೀವನರಾಮ್ ಮನುಕುಲಕ್ಕೆ ಮಾದರಿ

ಬಾದಾಮಿ,ಏ6:ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಆದರ್ಶಗಳು ಮಾನವ ಕುಲಕ್ಕೆ ಮಾದರಿಯಾಗಿವೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುವುದು ಅವಶ್ಯವಾಗಿದೆ ಎಂದು ಪ್ರೌಢವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ವೈ.ಮಡಿವಾಳರ ಹೇಳಿದರು.
ಅವರು ಸೋಮವಾರ ನಗರದ ಬಿ.ಆರ್.ಸಿ.ಕೇಂದ್ರದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಂ ಅವರ 114ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಸಿರು ಕ್ರಾಂತಿಯ ಹರಿಕಾರ, ಉತ್ತಮ ಸಂಸದೀಯ ಪಟು ಡಾ.ಬಾಬು ಜಗಜೀವನರಾಂ ಅವರು ನಡೆದು ಬಂದ ದಾರಿ, ಹೋರಾಟ ಹಾಗೂ ಅವರ ತತ್ವಸಿದ್ದಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ದೇಶದ ಅಭಿವೃದ್ದಿ ಜೊತೆಗೆ ಶೋಷಿತ ಸಮುದಾಯವನ್ನು ಏಳಿಗೆ ತರುವಲ್ಲಿ ಶ್ರಮಿಸಿದ್ದು, ಶೋಷನೆ ರಹಿತ ಸಮಾಜವನ್ನು ಕಟ್ಟುವ ಸಂಕಲ್ಪ ಬಾಬು ಜಗಜೀವನರಾಂ ಅವರದಾಗಿತ್ತು. ನಾವೆಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕಾದರೆ ಮಹಾತ್ಮರ ಮಾರ್ಗದರ್ಶನ ಅವಶ್ಯವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ(ಪ್ರೌಢ) ಶ್ರೀಮತಿ ಡಿ.ಬಿ.ಹಡಗಲಿ, ಪ್ರಾಥಮಿಕ ಬಿ.ಆರ್.ಪಿ. ಬಿ.ಎಫ್.ಕುಂಬಾರ, ಸಮೂಹ ಸಂಪನ್ಮೂಲ ವ್ಯಕ್ತಿ ಆನಂದಸ್ವಾಮಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಎಸ್.ಚೌಕದ, ಎಚ್.ಆರ್.ಕಡಿವಾಲ, ಕೆ.ಎಸ್.ಮಸಬಿನಾಳ, ಸಿಬ್ಬಂದಿಗಳಾದ ಮಂಜುನಾಥ ಅರಹುಣಸಿ, ಜಯಶ್ರೀ ನೋಟಗಾರ, ಪ್ರಕಾಶ ಕೊಳ್ಳಿ ಹಾಜರಿದ್ದರು