ಡಾ.ಬಾಬು ಜಗಜೀವನರಾಮ್ ಜಯಂತಿ ನಿರ್ಲಕ್ಷ್ಯೆ

ಗಬ್ಬೂರು.ಏ.೦೮-ಭಾರತದ ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ೧೧೪ನೇ ಜಯಂತಿಯನ್ನು ದಿ. ೦೫ ರಂದು ಮುಂಡರಗಿ ಗ್ರಾಮದ ಹೈಸ್ಕೂಲ್ ಮುಖ್ಯ ಶಿಕ್ಷಕನಾದ ಜಗದೀಶ ವಕ್ತಾರ್ ಜಯಂತಿಯನ್ನು ಆಚರಣೆ ಮಾಡದೆ ಕಾನೂನು ಉಲ್ಲಂಘಿಸಿದ್ದಾರೆ.
ಶೋಷಿತ ಜನಾಂಗದ ವ್ಯಕ್ತಿ ಎಂದು ತಿಳಿದುಕೊಂಡು ಅವರನ್ನು ನಾವು ಯಾಕೆ ಆಚರಿಸಬೇಕೆಂಬ. ಕಾರಣದಿಂದ ಜಯಂತಿಯನ್ನು ಮಾಡುವಲ್ಲಿ ಮತ್ತು ಶಾಲಾ ಮಕ್ಕಳಿಗೆ ದೇಶದ ಮಾಜಿ ಪ್ರಧಾನಿ ಡಾ.ಬಾಬುಜಗಜೀವನರಾಮ್ ರವರ ಅಪಾರ ಕೊಡುಗೆಯನ್ನು ಮಕ್ಕಳಿಗೆ ಪರಿಪಾಠ ಮಾಡದೆ ಶೋಷಿತ ಜನಾಂಗದವರನ್ನು ಮುಖ್ಯಗುರುಗಳು ಅವಮಾನ ಮತ್ತು ಅಪಮಾನ ಮಾಡುವುದರ ಮೂಲಕ ಜಯಂತಿಯನ್ನು ಆಚರಿಸದೇ ನಿರಾಕರಿಸಿದ್ದಾರೆ .ಕೂಡಲೇ ಹೈಸ್ಕೂಲ್ ಮುಖ್ಯ ಗುರುಗಳಿಗೆ ಕಾನೂನು ಕ್ರಮ ಕೈಗೊಂಡು ಅಮಾನತ್ತುಗೋಳಿಸಬೇಕೆಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸಲಾಯಿತು .
ನಂತರ ಅವರು ಶಾಲೆಗೆ ಕಾರ್ಯನಿರ್ವಾಹದಾಗಿನಿಂದ ಇಲ್ಲಿಯವರೆಗೆ ಮುಖ್ಯಗುರುಗಳು ಸರಿಯಾಗಿ ಶಾಲೆಗೆಹಾಜರಾಗದೇ ಇರುವುದು ಈಗಾಗಲೇ ಇಲಾಖೆಗೆ ಗ್ರಾಮಸ್ಥರಿಂದ ದೂರುನೀಡಿದರು ಯಾವುದೇ ಕ್ರಮ ಕೈಗೋಂಡಿಲ್ಲ ಅದೇ ರೀತಿ ಇವರ ಮೇಲೆ ಸರಕಾರದ ಸೂಕ್ತ ಕ್ರಮಕೈಗೊಳ್ಳದೇ ವಿಫಲಗೊಂಡಿರುವುದರಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ಮಾಡಲು ಸರಕಾರವೇ ಮುಖ್ಯ ಗುರುಗಳಿಗೆ ಸಹಕಾರ ನೀಡುತ್ತಿದ್ದು. ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಯ್ಯ ಕಟ್ಟಿಮನಿ, ಹನುಮಂತ ಮನ್ನಾಪುರ ,ಶಿವರಾಜ ತಳವಾರ, ಮಲ್ಲಿಕಾರ್ಜುನ ಜೋಂಡೆ, ಭೀಮಾಶಂಕರ ಯರಮಸಾಳ, ರಾಘವೇಂದ್ರ ಕೇಂಗಲ್ ಅಂಜಳ ಮುಂತಾದವರು ಇದ್ದರು.