ಡಾ.ಬಾಬು ಜಗಜೀವನರಾಮರ ಭಾವಚಿತ್ರ ಇರುವ ನಾಮ ಫಲಕ ಹರಿದು ಅವಮಾನಗೊಳಿಸಿದ ಕಿಡಿಗೇಡಿಗಳ ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ನ.5: ನಗರದ ಟೌನ್ ಹಾಲ ಆವರಣದಲ್ಲಿರುವ ಡಾ. ಬಾಬು ಜಗಜೀವನ ರಾಮ ಇವರ ಪುತ್ಥಳಿ ಮುಂಬಾಗದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಡಾ. ಬಾಬು ಜಗಜೀವನ ರಾಮ ಅವರ ಭಾವಚಿತ್ರ ಇರುವ ನಾಮ ಫಲಕವನ್ನು ಹರಿದು ಅವಮಾನಗೊಳಿಸಿದವರ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಡಾ ಬಾಬು ಜಗಜೀವನ ರಾಮ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜು ಎಸ್.ಕಟ್ಟಮನಿ ನೇತೃತ್ವದಲ್ಲಿ ಡಾ. ಬಾಬು ಜಗಜೀವನ ರಾಮ ಇವರ ಪುತ್ಥಳಿ ಎದುರುಗಡೆ ಕೇಲ ಕಾಲ ರಸ್ತೆ ತಡೆದ್ದು ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ರಾಹುಲ ಟಿ ಮೇತ್ರೆ, ಸಚಿನ ಕಟ್ಟಿಮನಿ, ಪ್ರದೀಪ ಭವೆ, ದಶರಥ ಕಲಗುರ್ತಿ, ವಿಠ್ಠಲ ವಾಲಿಕಾರ, ಮಲ್ಲಿಕಾರ್ಜುನ ಎಮ್.ಸರಡಗಿ, ಪ್ರಕಾಶ ಮಾಳಗೆ, ಹನಮಂತ ರತ್ನಡಗಿ, ಬಂಡೇಶ ರತ್ನಡಗಿ, ಮರಲಿಂಗ ಅಣಗಿ, ಅಶ್ವಥ ತಾರಫೈಲ್, ಸುರೇಶ ಇಟಗಿ, ಶಿವಾಜಿ, ನಾಗರಾಜ, ಸಚಿನ್ ತಾರಫೈಲ, ಹರೀಶ್ಚಂದ್ರ ದೊಡ್ಡಮನಿ, ಲೋಹಿತ ರಾಜಾಪುರ,ಪ್ರಶಾಂತ ಬಾಪು ನಗರ, ಕುಶಾಲ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ, ರವಿ ಕಟ್ಟಿಮನಿ, ಮನೋಹರ ಬಿರನೂರ, ನಿಂಗಪ್ಪ ತಿಲಕನಗರ, ರವಿ ಗುಲಾಬಾಡಿ, ಮಹೇಶ ಮುಲಿ ಮನಿ, ಗುರುರಾಜ ಭಂಡಾರಿ, ಶಿವು ಕಟ್ಟಮನಿ, ರವಿ ಕಟ್ಟಿಮನಿ, ಲಕ್ಷ್ಮೀಪುತ್ರ ಹಾಗೂ ಸಮಾಜದ ಯುವ ಮುಖಂಡರು ಇದ್ದರು.