ಡಾ.ಬಾಬು ಜಗಜೀವನರಾಮರವರ 36ನೇ ಪುಣ್ಯಸ್ಮರಣೆ ನಾಳೆ

ಕಲಬುರಗಿ,ಜು.5-ಹಸಿರು ಕ್ರಾಂತಿ, ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ ಜಿಲ್ಲಾ ಸಮಿತಿ ವತಿಯಿಂದ ನಾಳೆ ಬೆಳಿಗ್ಗೆ 9 ಘಂಟೆಗೆ ನಗರದ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್)ದ ಮುಂದುಗಡೆ ಇರುವ ಡಾ.ಬಾಬು ಜಗಜೀವನರಾಮ ರವರ ಪುತ್ಥಳಿ ಬಳಿ 36ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಬಾಬು ಜಗಜೀವನರಾಮ ರವರ 36ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಿತಿ ಅಧ್ಯಕ್ಷ ಪ್ರಕಾಶ ಮಾಳಗೆ ಮನವಿ ಮಾಡಿದ್ದಾರೆ.