ಡಾ.ಬಾಬು ಜಗಜೀವನರಾಮರವರ ಆದರ್ಶ ಸಾರ್ವಕಾಲಿಕ : ಪ್ರೊ.ಬಿ.ಎಸ್.ಬಿರಾದಾರ

ಬೀದರ:ಎ.6:ಭಾರತ ದೇಶ ಕಂಡಂತಹ ಅಪರೂಪದ ರಾಜಕಾರಣಿ, ಮಹಾಮುತ್ಸದ್ದಿ, ಭಾರತದ ಅಭಿವೃದ್ಧಿಗೆ ಅಪೂರ್ವ ಕೊಡುಗೆ ನೀಡಿದ ನಾಯಕ ಡಾ.ಬಾಬು ಜಗಜೀವನರಾಮರವರು. ಅವರ ಜೀವನ ವಿಧಾನ, ಆದರ್ಶಗಳು ಸಾರ್ವಕಾಲಿಕವೆಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ನುಡಿದರು. ಅವರು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮರವರ 116ನೆಯ ಜಯಂತಿ ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದರು. ಇತಿಹಾಸ ಕಂಡಂತಹ ವಿಶಿಷ್ಟ ರಾಜಕಾರಣಿಗಳಾಗಿದ್ದ ಡಾ.ಜಗಜೀವನರಾಮರವರು ದೇಶದ ಅನೇಕ ಪ್ರಧಾನಿಗಳೊಂದಿಗೆ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಮಹಾನುಭಾವರು. ಅದರಲ್ಲೂ ಕೃಷಿ ಸಚಿವರಾಗಿ, ಕಾರ್ಮಿಕ ಸಚಿವರಾಗಿ ದೇಶಕ್ಕೆ ನೀಡಿದ ಅವರ ಕೊಡುಗೆ ಶ್ಲಾಘನೀಯವಾದುದು. ಅಪ್ಪಟ ದೇಶಭಕ್ತರಾಗಿದ್ದ ಜಗಜೀವನರಾಮವರವರನ್ನು ದೇಶ ಸದಾ ಸ್ಮರಿಸುವ ಆದರ್ಶ ವ್ಯಕ್ತಿಗಳಾಗಿದ್ದರು ಎಂದರು.

  ಸಮಾರಂಭದಲ್ಲಿ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ ವಿ.ಗಬಾಡಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.