ಡಾ. ಬಾಬು ಜಗಜೀವನರಾಂ ಅವರು ದೇಶಕ್ಕಾಗಿ ಶ್ರೇಷ್ಠ ಕೊಡುಗೆ ನೀಡಿದ್ದಾರೆ:ಗೋವಿಂದರೆಡ್ಡಿ

ಬೀದರ:ಏ.6: ದೇಶದಲ್ಲಿ ಹಸಿರು ಕ್ರಾಂತಿ ತರುವ ಮೂಲಕ ಡಾ|| ಬಾಬು ಜಗಜೀವನರಾಂ ಅವರು ದೇಶಕ್ಕಾಗಿ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಡಾ|| ಬಾಬು ಜಗಜೀವನರಾಂ ಅವರ 117ನೇ ಜಯಂತಿ ಅಂಗವಾಗಿ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನಮ್ಮ ದೇಶದ ಜನಸಂಖ್ಯೆ 30 ಕೋಟಿ ಇತ್ತು ಇಂದು 140 ಕೋಟಿ ಜನ ಇದ್ದರು ಯಾರಿಗೂ ಆಹಾರದ ಸಮಸ್ಯೆಯಾಗಿಲ್ಲ ಅದು ಜಗಜೀವನರಾಂ ಅವರ ಮುಂದಾಲೋಚನೆ ಆಗಿತ್ತು ಅವರೊಬ್ಬ ದೂರ ದೃಷ್ಟಿಯ ನಾಯಕರಾಗಿರುವ ಕಾರಣ ನಮ್ಮ ದೇಶದ ಕೃಷಿಯಲ್ಲಿ ಬಹುದೊಡ್ಡ ಬದಲಾವಣೆ ತರುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ದರಾದರು.
ಆಫ್ರಿಕಾದಂತಹ ಹಲವಾರು ದೇಶಗಳಲ್ಲಿ ಜನರಿಗೆ ಇನ್ನು ಸರಿಯಾಗಿ ಊಟ ಸಿಗದೆ ಅವರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಆದರೆ ನಮ್ಮ ದೇಶದಲ್ಲಿ 140 ಕೋಟಿ ಜನರಿದ್ದರು ಇಲ್ಲಿ ಆಹಾರದ ಸಮಸ್ಯೆ ಇಲ್ಲ ಅದು ಜಗಜೀವನರಾಂ ಅವರ ದೂರದೃಷ್ಟಿಯಾಗಿದೆ. ಅವರು ದೇಶದ ಉಪ ಪ್ರಧಾನ ಮಂತ್ರಿ ಮಾತ್ರವಲ್ಲದೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಎಲ್ಲರಿಗೂ ಜಗಜೀವನರಾಂ ಜಯಂತಿಯ ಶುಭಾಶಯಗಳು ಹಾಗೂ ಅವರ ತತ್ವ ಮತ್ತು ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಮುನ್ನಡೆಯೋಣ ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ ಡಾ|| ಬಾಬು ಜಗಜೀವನರಾಂ ಅವರಿಗೆ ನಮ್ಮ ದೇಶದ ಮುಂದಿನ ಭವಿಷ್ಯದ ಗುರಿ ಇತ್ತು ಹಾಗಾಗಿ ಅವರು ದೇಶದಲ್ಲಿ ಆಹಾರದ ಕೊರತೆಯಾಗಬಾರದು ಎಂದು ಹಸಿರು ಕ್ರಾಂತಿಯನ್ನೆ ಮಾಡಿದರು. ಇಂದು ನಮ್ಮ ದೇಶದಲ್ಲಿ ಇಷ್ಟು ಜನಸಂಖ್ಯೆ ಇದ್ದರೂ ಯಾರು ಆಹಾರ ಸಮಸ್ಯೆಯಿಂದ ಬಳಲುತ್ತಿಲ್ಲ. ನಾನು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಕೆಲಸ ಮಾಡುವಾಗ ದಕ್ಷಿಣ ಸುಡಾನಲ್ಲಿ ಇದ್ದೆ ಅಲ್ಲಿ ಒಂದು ಕೋಟಿ ಜನರಿಗೆ ಆಹಾರ ಒದಗಿಸಲು ಆಗುತ್ತಿಲ್ಲ. ಜನರು ಅಲ್ಲಿ ಆಹಾರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಗಜೀವನರಾಂ ನಂತಹ ನಾಯಕರು ಆ ದೇಶದಲ್ಲಿ ಇರದ ಕಾರಣ ಅಲ್ಲಿ ಆ ಸಮಸ್ಯೆಯಾಗಿರಬಹುದು. ಅವರ ತತ್ವ ಮತ್ತು ಸಿದ್ದಾಂತಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಲು ಸರ್ಕಾರದ ವತಿಯಿಂದ ಈ ಜಯಂತಿಯನ್ನು ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಗಿರೀಶ್ ಬದೋಲೆ ಮಾತನಾಡಿ ಇವತ್ತು ಸಮತಾ ದಿನ ಎಂದು ಕರೆಯಲಾಗುತ್ತದೆ. ಇಂಡೋ-ಭಾಂಗ್ಲಾ ಯುದ್ಧ ಸಂಧರ್ಭದಲ್ಲಿ ಡಾ|| ಬಾಬು ಜಗಜೀವನರಾಂ ಅವರು ರಕ್ಷಣಾ ಮಂತ್ರಿಯಾಗಿದ್ದರು. ಹಸಿರು ಕ್ರಾಂತಿಯ ಹರಿಕಾರ ಎಂದು ಅವರನ್ನು ಕರೆಯುತ್ತಾರೆ ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಬೀದರ ನಗರದ ಹೈದ್ರಾಬಾದ ರಸ್ತೆಯಲ್ಲಿರುವ ಡಾ|| ಬಾಬು ಜಗಜೀವನರಾಂ ಪುತ್ಥಳಿಗೆ ತೆರಳಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಹೂ ಮಾಲೆ ಹಾಕುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಎಚ್.ಎಸ್, ಜಗಜೀವನರಾಂ ಸಮಾಜದ ಮುಖಂಡರಾದ ಫನಾರ್ಂಡೀಸ್ ಹಿಪ್ಪಳಗಾಂವ, ಮಾರುತಿ ಭೌದ್ದೆ, ರಾಜು ಕಡ್ಯಾಳ, ಅಭಿ ಕಾಳೆ, ರೋಹಿದಾಸ ಘೋಡೆ, ಚಂದ್ರಕಾಂತ ಹಿಪ್ಪಳಗಾಂವ, ವಿಜಯಕುಮಾರ ಸೋನಾರೆ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.