ಗುರುಮಠಕಲ್:ಎ.6: ಪಟ್ಟಣದ ಪುರಸಭೆ ಆವರಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾ. ಬಾಬು ಜಗಜೀವನರಾಂ ಅವರ 116 ನೇ ಜನ್ಮದಿನಾಚರಣೆ ಆಚರಿಸಲಾಯಿತು
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ ಅವರು ಮಾತನಾಡಿ ಹಸಿರು ಕ್ರಾಂತಿಯ ಹರಿಕಾರರೆಂದು ಖ್ಯಾತ ರಾಗಿರುವ ಅವರು ಸಮಾನತೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಮತ್ತು ಇದು ಅಲ್ಲದೆ ಸಮಾಜ ಸೇವೆಗಾಗಿ ತಮ್ಮದೇ ಆದ ಸೇವೆ ಸಲ್ಲಿಸಿ ವಿವಿಧ ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಹಸಿರು ಕ್ರಾಂತಿಯ ಹರಿಕಾರ ರೆಂದು ಹೆಸರು ವಾಸಿಯಾಗಿದ್ದರು. ಇಂತಹ ಉನ್ನತವಾದ ವಿಚಾರಗಳನ್ನು ನಾವೆಲ್ಲರು ತಪ್ಪದೆ ಪಾಲಿಸಬೇಕೆಂದು ಈ ಸಂದರ್ಭದಲ್ಲಿ ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಸಿಬ್ಬಂದಿ ಯವರು ಪ್ರಶಾಂತ.ರಾಮುಲು .ಅಶೋಕ. ಪರಶುರಾಮ. ಶ್ರೀ ನಿವಾಸ. ನರೇಶ್. ಭೀಮಾಶಂಕರ. ಮಾಳಮ್ಮ. ನೀಲಮ್ಮ. ರಿಯಾಜ್.ವೀರಭದ್ರಪ್ಪ. ಸುಭಾನ್ ಬಾಬಾ. ಇಸ್ಮಾಯಿಲ್. ರಾಕೇಶ್ ಇತರರು ಇದ್ದರು.