ಡಾ. ಬಾಬು ಜಗಜೀವನರಾಂರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ: ವಿದ್ಯಾವತಿ ಅಂಕಲಗಿ

ವಿಜಯಪುರ, ಏ.6-ಮಾಜಿ ಉಪಪ್ರಧಾನಿ ದಿ. ಡಾ. ಬಾಬುಜಗಜೀವನರಾಂ ರವರ 114 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಾಬುಜಗಜೀವನರಾಂ ರವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಮಹಿಳಾ ಉಪಾಧ್ಯಕ್ಷೆ ಯಾದ ವಿದ್ಯಾವತಿ ಅಂಕಲಗಿ ರವರು ಮಾತನಾಡಿ ಡಾ. ಬಾಬುಜಗಜೀವನರಾಂ ರವರು ತಮ್ಮ ಇಡೀ ಜೀವನವನ್ನು ಈ ದೇಶಕ್ಕೆ ತ್ಯಾಗಮಾಡಿ ಕಾರ್ಮಿಕರ, ಬಡವರ, ಹಿಂದುಳಿದವರ, ದಲಿತರ ಪರವಾಗಿ ಹೋರಾಟ ಮಾಡಿ ಈ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಅವರು ಈ ದೇಶದ ಉನ್ನತ ಸ್ಥಾನಗಳಾದ ಗೃಹಮಂತ್ರಿ, ಕಾರ್ಮಿಕ, ಆಹಾರ, ನೀರಾವರಿ, ಕೃಷಿ ಹಾಗೂ ಉಪ ಪ್ರಧಾನಿ ಪಟ್ಟದ ವರೆಗೆ ಅತೀ ಹೆಚ್ಚು ದೀರ್ಘಕಾಲದವರೆಗೆ ಕೇಂದ್ರ ಮಂತ್ರಿ ಸ್ಥಾನ ಹೊಂದಿದ ಕೀರ್ತಿ ಹೊಂದಿರುತ್ತಾರೆ. ಇಂತಹ ಮಹಾಪರುಷರು ನಮಗೆ ಮಾರ್ಗ ತೋರಿಸಿ ಕೊಟ್ಟಿದ್ದು, ಇವರ ಮಾರ್ಗದಲ್ಲಿ ನಡೆದು ಇಂದಿನ ಸಮಾಜಕ್ಕೆ ತಿಳಿಹೇಳಿ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸೋಣ ಎಂದು ಕರೆ ಕೊಟ್ಟರು.
ಇನ್ನೋರ್ವ ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ ಡಾ|| ಬಾಬುಜಗಜೀವನರಾಂ ರವರು ಹಸಿರು ಕ್ರಾಂತಿಗೆ ಹೆಚ್ಚು ಆದ್ಯತೆ ನೀಡಿ ಹಸಿರು ಕ್ರಾಂತಿ ಎಂಬ ಬಿರುದು ಪಡೆದು ಏಕೈಕ ವ್ಯಕ್ತಿ ಇವರಾಗಿದ್ದರು. ಈ ದೇಶದ ಕಟ್ಟಕಡೆಯ ವ್ಯಕ್ತಿಯು ಸಮಾನವಾಗಿ ಬಾಳ್ವೆ ಮಾಡಬೇಕೆಂದು ಬಯಸಿ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿ ನ್ಯಾಯ ಒದಗಿಸಿಕೊಟ್ಟ ಧೀಮಂತ ಮಹಾಪುರುಷರಾಗಿದ್ದರು. ಕಾಂಗ್ರೆಸ್ ಪಕ್ಷ ಅವರನ್ನು ಅನೇಕ ಅವಕಾಶಗಳನ್ನು ಕೊಟ್ಟು ಈ ದೇಶದ ಅಳಿಲು ಸೇವೆ ಮಾಡಲು ಸಂಪೂರ್ಣ ಅಧಿಕಾರ ನೀಡಿ ಧೀರ್ಘಾವದಿ ವರೆಗೆ ಅನೇಕ ಖಾತೆಗಳನ್ನು ನೀಡಿಅವಕಾಶ ಮಾಡಿ ಕೊಟ್ಟ ಪಕ್ಕಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಅನ್ನುವುದು ನಾವು ಅರಿತು ಕೊಳ್ಳಬೇಕಾಗುತ್ತದೆ. ಅದನ್ನು ಸದ್ಬಳಕೆ ಮಾಡಿ ಅವರು ಅಹಿಂದ ವರ್ಗಗಳಿಗೆ ಬಡವರಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಟ್ಟು ಪ್ರತಿ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷದ ಸಂಘಟನೆ ಸದೃಢಗೊಳಿಸುವ ಕಾರ್ಯ ಮಾಡಿ ಮತ್ತೆ ಪಕ್ಷ ಈ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಮೀರಅಹ್ಮದ ಬಾಗಲಕೋಟ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಡಿ.ಎಲ್. ಚವ್ಹಾಣ, ವಿಜಯಕುಮಾರ ಘಾಟಗೆ, ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಕೋಆರ್ಡಿನೇಟರರಾದ ಎಸ್.ಎಂ.ದುಂಡಸಿ, ನಾಗಠಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಲಿಯಾಸ ಬಗಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸುಬಾಷ ಕಾಲೇಬಾಗ, ಈರಪ್ಪ ಜಕ್ಕಣ್ಣವರ, ಶರಣಪ್ಪ ಯಕ್ಕುಂಡಿ, ಸಂತೋಷ ಬಾಲಗಾಂವಿ, ಕಾಂಗ್ರೆಸ್ ಮುಂಖಂಡರುಗಳಾದ ಭಾರತಿ ಹಡಪದ, ಆಶೀಮಾ ಕಾಲೇಬಾಗ, ಸುಜಾತಾ ಸಿಂಧೆ, ಸಮೀನ ಅಕ್ಕಲಕೋಟ, ದಾವಲಸಾಬ ಬಾಗವಾನ, ಪ್ರಕಾಶ ಕಟ್ಟಿಮನಿ, ಇಲಿಯಾಸ ಸಿದ್ಧಕಿ, ತಜೋದ್ದೀನ ಖಲಿಫಾ, ಪಿರೋಜ ಶೇಖ, ಗೂಡುಸಾಬ ತೊರಗಲ್, ಬೀರಪ್ಪಾ ಮ್ಯಾಗೇರಿ, ಅಮಿತ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.