ಡಾ. ಬಾಬುಜೀ ದೇಶ ಕಂಡ ಅಪರೂಪದ ರಾಜಕಾರಣಿ : ತೆಲಾಂಗ

ಕಾಳಗಿ. ಏ.6 : ಹಸಿರು ಕ್ರಾಂತಿಯ ಹರಿಕಾರ ಭಾರತ ದೇಶದ ಮೊಟ್ಟಮೋದಲ ಉಪಪ್ರಧಾನಿ ಡಾ. ಜಗಜೀವನರಾಂ ಅವರು ಈ ದೇಶ ಕಂಡ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾಳಗಿ ತಾಲೂಕ ಆಡಳಿತದಿಂದ ಸೋಮವಾರ ಇಲ್ಲಿಯ ಪಟ್ಟಣ ಪಂಚಾಯತ ಆವರಣದಲ್ಲಿ ಸರಳವಾಗಿ ಏರ್ಪಡಿಸಲಾಗಿರುವ ಡಾ. ಬಾಬು ಜಗಜೀವನರಾಂರವರ 114 ನೇ ಜಯಂತೋತ್ಸವ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಪಿ ಡಬ್ಲ್ಯೂಡಿ ಎಇಇ ಸಿದ್ರಾಮಪ್ಪ ದಂಡಗುಲ್ಕರ ಮಾತನಾಡಿ ಬಾಬುಜಿ ಅವರ ಸ್ವಾತಿಕ ವಿಚಾರ, ರೈತಪರ ಕಾಳಜಿ, ಸಾಂವಿಧಾನಿಕ ಬದ್ದವಾದ ಪಾರದರ್ಶಕ ರಾಜಕೀಯ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದರು.
ಭಾರತ ದೇಶದ ಪ್ರಭಾವಿ ಮಹಾನ ನಾಯಕರಲ್ಲಿ ಬಾಬುಜಿಯವರು ಒಬ್ಬರಾಗಿದ್ದರು. ಇಂಥಹ ಮಹಾತ್ಮರ ಆದರ್ಶ ಪರಿಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಬಾಬುಜಿಯವರಂತಹ ಜೀವನಶೈಲಿ ನಾವೆಲ್ಲರೂ ಆಚರಣೆಗೆ ತರುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಮಾದಿಗ ಸಮಾಜದ ಮುಖಂಡ ಹಾಗೂ ಬಾಬು ಜಗಜೀವನರಾಂ ಜಯಂತೋತ್ಸವ ಕಾಳಗಿ ತಾಲೂಕು ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಕಟ್ಟಿಮನಿ, ಸೂರ್ಯಕಾಂತ ಕಟ್ಟಿಮನಿ ಮಾತನಾಡಿದರು.

ಇದಕ್ಕೂಮೊದಲು ಕಾಳಗಿ ತಾಲೂಕು ಗ್ರೇಡ್-2 ತಹಸೀಲ್ದಾರ ನಾಗನಾಥ ತಿರ್ಪೆ ಅವರು ಬಾಬುಜಿಯವರ ಭಾವಚಿತ್ರಕ್ಕೆ ಪೂಜಿಸಿ ಬೃಹದಾಕಾರದ ಹೂ ಮಾಲೆ ಹಾಕಿ ಗೌರವ ಸಲ್ಲಿಸಿದರು.
ಡೆಪ್ಯೂಟಿ ತಹಸೀಲ್ದಾರ ಮಾಣಿಕ ದುತ್ತರಗಿ, ಭಗವಾನ ಸಿಂಗೆ, ಸುಂದರ ಸಾಗರ ಸಾಸರಗಾಂವ, ರವಿ ಸಿಂಗೆ ತಿಪ್ಪಣ ಮಾಸ್ಟರ ಸಿರಿಮನಿ, ರಾಜೇಂದ್ರಬಾಬು ಹಿರಾಪೂರಕರ್, ಕಾಳಪ್ಪ ಕರೆಮನೋರ, ಪ್ರಶಾಂತ ಕದಂ,ರಾಘವೇಂದ್ರ ಗುತ್ತೇದಾರ, ಕೃಷ್ಣ ಕಟ್ಟಿಮನಿ, ಶಾಂತಕುಮಾರ ಗುತ್ತೇದಾರ, ಮಹೇಶ ಭರತನೂರ, ಸಂಜು ಮೋಘಾ, ಜಗನ್ನಾಥ ಚಂದನಕೇರಿ, ಸಂತೋಷ ನರನಾಳ, ಪರಮೇಶ್ವರ ಕಟ್ಟಿಮನಿ, ಶಿವಕುಮಾರ ಚಿಂತಕೋಟಿ, ಎಎಸ್ಐ ಕುಮಾರ ವ್ಯಾಸ, ಮಂಜುನಾಥ ಪಿಸಿ. ಸತೀಶ ಸಕ್ರಿ, ಲಖಾನ ಮೋಘಾ ಸೇರಿದಂತೆ ಅನೇಕರಿದ್ದರು.