ಇಂಡಿ:ಎ.16: ಡಾ, ಬಾಬಾಸಾಹೇಬ್ ಅಂಬೇಡ್ಕರರವರು ಒಬ್ಬ ವ್ಯಕ್ತಿ ಮಾತ್ರವಲ್ಲ,ಮಹಾನ್ ವ್ಯಕ್ತಿಯಾಗಿ ಗುರುತಿಸಲ್ಪಡುತ್ತಾರೆ .ಭಾರತದ ಸಾಮಾಜಿಕ ತಾರತಮ್ಯಗಳನ್ನು ಬದಲಿಸಿ ಸಮತಾ ಸಮಾಜವನ್ನು ನಿಮಾ9ಣ ಮಾಡಲು ಪಣತೊಟ್ಟು ಮಹಾನ್ ವ್ಯಕ್ತಿಅವರು ಎಂದು ಗ್ರಾಮ ಪಂಚಾಯತ್ ಸದಸ್ಯ ಸೋಮಣ್ಣ ಮ್ಯಾಕೇರಿ ಹೇಳಿದರು. ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ಡಾ, ಬಾಬಾಸಾಹೇಬ್ ಅಂಬೇಡ್ಕರ್ 132ನೇ ಜಯಂತಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ ಅವರು ಸಮಾನತೆಯಲ್ಲಿ ಬಲವಾದ ನಂಬಿಕೆ ಹೊಂದಿದ್ದಾರೆ.ಮಹಿಳಾ ಹಕ್ಕುಗಳಿಗೆ ಬಲವಾದ ಬೆಂಬಲವನ್ನು ನೀಡಿದರು.ಮಹಿಳೆಯರು ಶಿಕ್ಷಣ ಪಡೆಯಲು ,ನೌಕರಿಯಲ್ಲಿ ಮೀಸಲಾತಿ ,ಮತದಾನದ ಹಕ್ಕನ್ನು, ಸ್ವತಂತ್ರವಾಗಿ ಬಾಳಲು ಅನುವು ಮಾಡಿಕೊಟ್ಟರು ಎಂದು ಹೇಳಿದರು.
.ಬಾಬಾಸಾಹೇಬ ಅಂಬೇಡ್ಕರರವರ ಭಾವಚಿತ್ರಕ್ಕೆ ಪೂಜೆಯನ್ನು ಶ್ರೀ ಸೋಮಯ್ಯ ಹಿರೇಮಠ ಸ್ವಾಮೀಜಿಯವರು ನೆರವೇರಿಸಿದರು.ಸಭೆಯನ್ನುದ್ದೇಶಿಸಿ ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಅನಿಲಗೌಡ ಅಳ್ಳಗಿಯವರು ಮಾತನಾಡಿ-ಮತದಾನ ಎಂಬ ವ್ಯವಸ್ಥೆ ಈ ಭಾರತ ದೇಶದ ಸಂವಿಧಾನದಲ್ಲಿ ಅಳವಡಿಸಿದಾಗ ,ಕೆಲವು ನಾಯಕರು ಡಾ.ಬಾಬಾಸಾಹೇಬರಿಗೆ ಒಂದು ಪ್ರಶ್ನೆ ಕೇಳುತ್ತಾರೆ ಅದೆನೆಂದರೆ ಬಾಬಾಸಾಹೇಬರೆ ದಲಿತರಿಗೆ ಜನಸಾಮಾನ್ಯರಿಗೆ ನೀವು ಮತದಾನದ ಹಕ್ಕನ್ನು ಕೊಟ್ಟಿದ್ದೀರಿ,ಆದರೆ ಬಲಿಷ್ಠ ಮೇಲ್ವರ್ಗದ ರಾಜಕಾರಣಿಗಳು ಆ ದಲಿತರ ಮತವನ್ನು ಗೆಲ್ಲಲು ಹಣ,ಹೆಂಡ್,ಎಲ್ಲವೂ ಆಮಿಷ ತೋರಿಸಿ ಮತವನ್ನು ಖರೀದಿಸುತ್ತಾರೆ.ಆಗ ನೀವು ಕೊಟ್ಟ ಮತದಾನದ ಹಕ್ಕಿಗೆ ಯಾವ ಬೆಲೆ ದೊರೆತಂತಾಗುತ್ತದೆ? ಎಂದು ಕೇಳಿದರು.ಆಗ ಬಾಬಾಸಾಹೇಬರು ಅವರಿಗೆ ಮರುತ್ತರವಾಗಿ ನೀವು ಹೇಳುವುದು ಸರಿ ಇದೆ.ಆದರೆ ಆಮೀಷತೋರಿಸಿ ಮತ ಹಾಕಿಕೊಳ್ಳುತ್ತೀರಿ ಹಾಕೊಳ್ಳಿ ,ಆದರೆ ಆ ಮತದಾನದ ಬೆಲೆ ನಮ್ಮ ಜನರಿಗೆ ಯಾವಾಗ ಅರಿವಾಗುತ್ತೊ ಆವಾಗ ನೀವು ಬಿಕ್ಷುಕರಿಗಿಂತ ಬಿಕ್ಷುಕರಾಗಿ ಕೀಳಾಗಿ ಬದುಕುತ್ತೀರಿ ಎಂದು ಅಂಬೇಡ್ಕರ್ ರವರು ಹೇಳಿದ್ದಾರೆ ಎಂದು ಮಾತನಾಡಿದರು.
ಶ್ರೀ ಸಿದ್ಧಾರಾಮ ಕೊಳ್ಳೂರ ಮಾತನಾಡಿ-ಅಂಬೇಡ್ಕರರವರು ತಮ್ಮ ಜೀವನಪೂತಿ9 ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ ಆ ಅನುಭವದ ಕಷ್ಟಗಳು ಈ ನಮ್ಮ ದೇಶದ ಬಡಜನರಿಗೆ ಬರಬಾರದು .ಈ ದೇಶಕ್ಕೆ ಸವ9ರ ಅಭಿವೃದ್ಧಿಗಾಗಿ ಸಂವಿಧಾನ ರಚನೆ ಮಾಡಿದ ಮಹಾನ್ ವ್ಯಕ್ತಿ.ಮನುಷ್ಯ ರಕ್ತದ ಹನಿ ಸುರಿಸಿದರೆ ಏನೂ ಆಗುವುದಿಲ್ಲ,ಆದರೆ ಕಷ್ಟದ , ಪರಿಶ್ರಮದ ಬೆವರಿನ ಹನಿ ಸುರಿಸಿದರೆ ನಾವು ಕಂಡ ಕನಸು ನನಸಾಗಲು ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ.ಎಂದು ಹೇಳಿದರು.
ಶ್ರೀ ಗಂಗಾಧರ ಕಾಂಬಳೆ ಶಿಕ್ಷಕರು ಮಾತನಾಡಿ-ಬಾಬಾಸಾಹೇಬರು ಕೇವಲ ತಮ್ಮ ಜನಾಂಗಕ್ಕೆ ಮಾತ್ರ ಸೀಮಿತವಾಗಿರದೆ ,ಇಡೀ ನಮ್ಮ ದೇಶದ ಸವಾ9ಂಗಿಣ ಅಭಿವೃದ್ಧಿಗಾಗಿ ಸಂವಿಧಾನವನ್ನು ರಚನೆ ಮಾಡಿದರು ಎಂದು ಹೇಳಿದರು.
ಶ್ರೀ ಪೈಗಂಬರ್ ದೇಸಾಯಿಯವರು ಮಾತನಾಡಿ-ದೇಶದ ಬಲಿಷ್ಠ ಗ್ರಂಥ ಸಂವಿಧಾನ ಅದನ್ನು ಕಾಪಾಡಿಕೊಂಡು ಉಳಿಸಿಕೊಂಡು ಹೋಗಬೇಕು.ಕೇವಲ ನಾವು ಕಾಯ9ಕ್ರಮಕ್ಕೆ ಸೀಮೀತವಾಗಬಾರದು ,ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಸೋಮಯ್ಯ ಮಠಪತಿ.ಶ್ರೀ ಪೈಗಂಬರ್ ದೇಸಾಯಿ.ಶ್ರೀಪರಶುರಾಮ ಮ ಹರಿಜನ.ಶ್ರೀ ಪರಶುರಾಮ ಬಾಸಗಿ.ಅನಿಲಗೌಡ ಅಳ್ಳಗಿ.ಶ್ರೀ ರಫೀಕ ವಾಲಿಕಾರ.ಶ್ರೀ ಸೋಮಶೇಖರ್ ಮ್ಯಾಕೇರಿ.ಶ್ರೀ ಸಾತಪ್ಪ ಗುಡಿಮನಿ.ಶ್ರೀ ಸಿದ್ದರಾಮ ಕೊಳ್ಳೂರ.ಶ್ರೀ ಗಂಗಾಧರ ಕಾಂಬಳೆ ಶಿಕ್ಷಕರು.ರಾಜಕುಮಾರ ಮೇಲಿನಕೇರಿ.ಶ್ರೀ ಕನ್ನಪ್ಪ ನಾದ. ಶ್ರೀ ಬಸವರಾಜ ಮೇಲಿನಕೇರಿ.ಶ್ರೀ ಪರಶುರಾಮ ಕಾಂಬಳೆ.ಮಹಾದೇವ ನಾಗರಳ್ಳಿ.ಶ್ರೀ ರಮೇಶ ಹರಿಜನ.ಶ್ರೀ ಆಕಾಶ ಮೇಲಿನಕೇರಿ.ಶ್ರೀ ಸುರೇಶ ಯಂಟಮಾನ.ಶ್ರೀ ಮುತ್ತಪ್ಪ ಮೇಲಿನ ಕೇರಿ.ಭೋಗಪ್ಪ ಹರಿಜನ.ರಾಕೇಶ ಸಿಂಘೆ.ಶಂಕ್ರೆಪ್ಪ ವಗ್ಗಿ.ಲಕ್ಷ್ಮಣ ಹರಿಜನ.ಹುಚ್ಚಪ್ಪ ಮ್ಯಾಕೇರಿ.ಪಂಡಿತ ಕೊಳೆಕಾರ.ಗುಂಡಪ್ಪ ಯರಗಲ್.ಆನಂದ ಗುಡಿಮನಿ. ಮಂಜುನಾಥ ವಗ್ಗಿ.ಅಶೋಕ ಮ್ಯಾಕೇರಿ.ಹುಸನಪ್ಪ ಗುಡಿಮನಿ.ಆಕಾಶ ಕಾಂಬಳೆ.ಅನಿಲ ಗುಡಿಮನಿ.ಜೈಭೀಮ ಗುಡಿಮನಿ.ಆಕಾಶ ಶಿವಶರಣ.ಮುತ್ತು ಕೊಳೆಕಾರ.ಸಚೀನ ತಳಕೇರಿ.ಶಿವಾನಂದ ನಾಗರಳ್ಳಿ.ಶಿವರಾಜ ಮೇಲಿನಕೇರಿ.ಶಶಿಕುಮಾರ ಗುಡಿಮನಿ.ಎಸ್.ಬಿ.ಹರಿಜನ ಇತರರು ಉಪಸ್ಥಿತರಿದ್ದರು.