ಡಾ.ಬಾಬಾಸಾಹೇಬ ಅಂಬೇಡ್ಕರ್ ಈ ದೇಶದ ಆಸ್ತಿ:ಡಾ ವಿಜಯಕುಮಾರ ಸಾಲಿಮನಿ

ಆಳಂದ: ಮೇ.20:ತಾಲೂಕಿನ ಭೂಸನೂರ ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ 133ನೇ ಜಯಂತ್ಯೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಡಾ. ವಿಜಯಕುಮಾರ ಸಾಲಿಮನಿ ನಾವು ಅನುಕೂಲಸ್ಥರಾಗಿ ನಮ್ಮ ಸ್ವಾರ್ಥ ಜೀವನಕ್ಕಾಗಿ ಸಿಟಿಯಲ್ಲಿ ಬದುಕುವುದು ಬದುಕು ಮಾತ್ರವಲ್ಲ ಮಹಾನ್ ಚಿಂತಕರವಿಚಾರಗಳನ್ನು ಹಳ್ಳಿ ಹಳ್ಳಿಗೆ ಹೋಗಿ ಜನರನ್ನು ತಿಳಿಹೇಳ ಬೇಕಾಗಿದೆ ಸ್ವಾತಂತ್ಯ ದೊರೆತು75 ವರ್ಷಗಳಾದರು ಕೂಡ ನಮ್ಮ ಬದುಕು ಇನ್ನು ಚಿಂತಾಜನಕವಾಗಿದೆ ಹಾಗಾಗಿ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು ಶಿಕ್ಷಣವೆ0ಬುದು ಹುಲಿಯ ಹಾಲಿ ಇದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಇದು ಬಾಬಾ ಸಾಹೇಬ್ರ ಸಂದೇಶವಾಗಿದೆ ಆದರೆ ನಾವು ಬಾಬಾ ಸಾಹೇಬ್ ರ ಋಣದ ಮಕ್ಕಳಾಗಿದ್ದೇವೆ ಇವತ್ತಿನ ಯುವಜನಾಂಗಕ್ಕೆ ಬಾಬಾ ಸಾಹೇಬ್ರು ಮಾದರಿಯಾಗಬೇಕು ಇದನ್ನು ಅರಿತುಕೊಂಡು ಬದುಕಬೇಕಾದ ಸಂದರ್ಭ ಬಂದಿದ ಮುಂದಿನ ದಿನಗಳು ಬಹಳ ಕಷ್ಟದ ದಿನಗಳಾಗಲಿವೆ ದೀನ ದಲಿತ ಹಾಗೂಯುವಜನಾಂಗಕ್ಕೆ ನಾಶಪಡಿಸಬೇಕಾದರೆ ಅವರ ಓಣಿಗಳಲ್ಲಿ ದೇವಸ್ಥಾನ ಗಳು ಮಾತ್ರ ಕಟ್ಟಬೇಕು ಆಗ ಮಾತ್ರ ಅವರ ಸಂಸ್ಕøತಿ ನಾಶಪಡಿಸಲು ಸಾಧ್ಯವಾಗುತ್ತದ ನನ್ನ ಜನಾಂಗ ಬದುಕಿದರೆ ಹುಲಿಗಳಂತೆ ಬದುಕಲಿ ನಾಯಿ ನರಿ ಯಂತೆ ಬದುಕಾಗಬಾರದು ಯಾಕೆಂದರೆಕುರಿ ಕೊಳಿ ಗಳನ್ನು ಬಲಿಕೊಡುತ್ತಾರೆಹುಲಿ ಸಿಂಹಗಳನಲ್ಲ ದೇವರು ದಿಂಡಿರಗಳ ಬಗ್ಗೆ ನಾವು ಸೂಕ್ಷ್ಮವಾಗಿ ಅರಿತುಕೊಳ್ಳ ಬೇಕಾದ ಸಂದರ್ಭ ಬಂದಿದೆ. ಆದರೆ ಇವು ಎಲ್ಲವುದಕ್ಕೆ ಪರಿಹಾರ ಶಿಕ್ಷಣದಲ್ಲಿ ಮಾತ್ರವಿದೆ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಸಂವಿಧಾನ ಉಳಿಯದಿದ್ದರೆ ನಮಗೆ ಉಳಿಗಾಲವಿಲ್ಲ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಯಾಕೆ ಹಿಂದೆ ಬಿಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ ಸಾಮಾಜಿಕನ್ಯಾಯ, ಆರ್ಥಿಕ ನ್ಯಾಯ ಧಾರ್ಮಿಕ ನ್ಯಾಯ ಮತ್ತು ಹಕ್ಕು ಕರ್ತವ್ಯ ನೀಡಿದವರು ಬಾಬಾಸಾಹೇಬರು ಈ ದೇಶದ ಆಸ್ತಿಯಾಗಿದ್ದಾರೆ ಎಂದು ಡಾ. ವಿಜಯಕುಮಾರ ಸಾಲಿಮನಿ ನುಡಿದರು. ಇನ್ನೊರ್ವ ಭಾಷಣಕಾರ ರಾಗಿ
ಆಗಮಿಸಿದ ಡಾ.ಪಂಡಿತ ಬಿ.ಕೆ. ರವರು ಮಾತನಾಡಿ ಕೈಕಟ್ಟಿ ನಿಲ್ಲುವ ವ್ಯಕ್ತಿಗೆ ಟೈ ಕಟ್ಟಿನಿಲ್ಲುವಂತೆ ಮಾಡಿದವರು ಬಾಬಾ ಸಾಹೇಬ ಅಂಬೇಡ್ಕರ್ ರವರು ಆಕಾಶ ನೋಡುತ್ತ ನಿಂತಿರುವ ಜನಾಂಗಕ್ಕೆ ಆಕಾಶಕ್ಕೆ ಹಾರುವಂತೆ ಮಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅವರ ಜಯಂತಿಗಳನ್ನು ಮಾಡುವುದು ಸಾಂಕೇತಿಕವಾಗಿ ಆಗಬಾರದು ಅವರ ವಿಚಾರಗಳನ್ನು ನಮ್ಮಲ್ಲಿಟ್ಟುಕೊಂಡು ಪರಸ್ಪರರಿಗೆ ತಿಳಿಯಪಡಿಸುತ್ತಾ ಸಾಗಬೇಕಾದ ಸಂದರ್ಭಬಂದಿದೆ . ನಮ್ಮೆಲ್ಲರ ನಗುವಿನ ಹಿಂದೆ ಬಾಬಾ ಸಾಹೇಬ್ರ ನೋವಿದೆ ಎನ್ನುವುದನ್ನು ನಾವು ಮರೆಯಬಾರದು ಸ್ವಾಭಿಮಾನದ ಅಂಬೇಡ್ಕರ ಸಂವಿಧಾನದ ಅಂಬೇಡ್ಕರ್ ವಿಚಾರಗಳ ಅಂಬೇಡ್ಕರ್
ಪುಸ್ತಕದ ಅಂಬೇಡ್ಕರ ಎಂದು ಹೇಳಿ ಅಂಬೇಡ್ಕರ್ ರವರು ಮೂರ್ತಿಗಳಲ್ಲಿ ಇಲ್ಲ ವಿಚಾರಗಳಲ್ಲಿದ್ದಾರೆ ಹೀಗಾಗಿ ಶಿಕ್ಷಣ ವಂತರಾಗಬೇಕು ವಿಚಾರವಂತರಾಗಬೇಕು ಬಾಬಾ ಸಾಹೇಬ್ರು ನಮ್ಮನ್ನು ರಾಜ ಮಹಾರಾಜರನ್ನಾಗಿ ಬದುಕಿ ಎಂದುಹೇಳಿ ಅಂತಹ ಬದುಕನ್ನು ಕಟ್ಟಿಕೊಟ್ಟಿ ದ್ದಾರೆ ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮಿಜಿಗಳು ಉಸ್ತುರಿ ಮಠ ಧುತ್ತರಗಾವ ಇವರು ಮಾತನಾಡಿ ಹೊರಗಿನ ಸಂಪತ್ತನ್ನು ಗಳಿಸದೆ ಒಳಗಿನ ಸಂಪನ್ನು ಗಳಿಸಿದವರು ಬಾಬಾ ಸಾಹೇಬ್ರು ಅಂತಹ ವಾರಸುದಾರರು ನಾವುಗಳಾಗಿದ್ದೇವೆ ನಮ್ಮ ಮೇಲೆ ಸಮಾಜದ ಋಣ ಹಿರಿಯರ ಋಣ ಮನೆಯ ಋಣ ಬಾಬಾಸಾಹೇಬರ ಋಣ ನಮ್ಮ ಮೇಲೆ ಇವೆ ನಾವು ಬಹಳ ಎಚ್ಚರಿಕೆಯಿಂದಿರಬೇಕು ಅಂದಭಕ್ತರಾಗುವದು ಬೇಡ ಬಾಬಾ ಸಾಹೇಬ್ ರಂತೆ ಜ್ಞಾನ ಮತ್ತು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಯಬೇಕಾಗಿದೆ ಇಂದಿಗೂ ವೈದಿಕತೆಯನ್ನು ನಮ್ಮ ಮೇಲೆ ಹೆರುತ್ತಲಿವೆ ಹಾಗಾಗಿ ಅದರಿಂದ ಎಚ್ಚರವಾಗಿರಬೇಕಾಗಿದೆ ಇವತ್ತಿಗೂ ದೀನ ದಲಿತ ತುಳಿತಕ್ಕೆ ಒಳಗಾದವರಿಗೆ ಆಸ್ತಿ ಇಲ್ಲ ನೌಕರಿ ಇಲ್ಲ ಮತ್ತು ಉತ್ತಮ ಉದ್ದಿಮೆದಾರರಿಲ್ಲ ಇವೆಲ್ಲವನ್ನು ತಿಳಿದುಕೊಂಡು ಇಂದು ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಹಾಗಾಗಿ ಶಿಕ್ಷಣವೆ ಅಸ್ತ್ರವಾಗಬೇಕಾಗಿದೆ ಅಂದಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ನುಡಿದರು ಜಯಂತಿಯ ಅಂಗವಾಗಿ ದಿನಾಂಕ 18.5.24 ರಂದು ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು ಇದೇ ಸಂದರ್ಭದಲ್ಲಿ ಎಸ್ .ಎಸ್. ಎಲ್. ಸಿ .ಮತ್ತು ಪಿ.ಯು.ಸಿ. ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಉಪಸ್ಥಿತಿ ವಿಠ್ಠಲ ಬೀಳಗಿ, ಗೋಪಾಲ ಕುರೇನ, ವಿಠ್ಠಲ ಕಾಂಬಳೆ, ಡಾ.ವಿಜಯಕುಮಾರ ಬೀಳಗಿ, ಶ್ರೀಶೈಲ ಯಂಕಂಚಿ, ಹಣಮಂತ ಹೋಟಕರ್, ಮಲ್ಲಿಕಾರ್ಜುನ ದೊಡ್ಡಮನಿ, ಲಕ್ಷ್ಮಣ ನಿಂಗದಳ್ಳಿ, ಸಾಗರ ಕಾಂಬಳೆ, ಲಾಲು ಕುರೇನ , ಬಾಬುರಾವ ಗೊಬ್ಬುರ, ಪ್ರಭು ಕುರೇನ ಲಕ್ಷ್ಮಣ ನಿಂಗದಳ್ಳಿ, ಸಿದ್ಧಾರಾಮ ಕಾಂಬಳೆ, ಧರ್ಮಾ ಬಂಗರಗಿ, ಮಹಾದೇವ ಕಾಂಬಳೆ, ಮಲ್ಲಿಕಾರ್ಜುನ ಬೋಳಣಿ, ಮಿಲಿಂದ ಮೇಘಾ ಮುಂತಾದವರು ಉಪಸ್ಥಿತರಿದ್ದರು. ಜಯಂತಿ ಸಮಿತಿಯಅಧ್ಯಕ್ಷರು ಮತ್ತು ಸರ್ವ ಸದಸ್ಯರ ನೇತೃತ್ವದಲ್ಲಿ ಜಯಂತಿ ವೈಭವದಿಂದ ಸಾಗಿತು. ಬಾಬು ಬೀಳಗಿ ಸ್ವಾಗತಿಸಿದರು. ಜಗದೀಶ ದೊಡ್ಡಮನಿ ನಿರೂಪಿಸಿದರು ಬಿಜಿ ಬೀಳಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಸಾಗರ ಕಾಂಬಳೆ ವಂದಿಸಿದರು.