ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಉತ್ಸವಕಲ್ಯಾಣದಲ್ಲಿ ವೈಭವದ ಮೆರವಣಿಗೆÉ

oplus_0

ಬಸವಕಲ್ಯಾಣ:ಏ.15: ಭಾರತೀಯ ದಲಿತ ಪ್ಯಾಂಥರ್, ಡಾ.ಅಂಬೇಡ್ಕರ್ ಅರ್ಬನ್ ಯುಥ್ ಕ್ಲಬ್, ಭೀಮನಗರ ಪಂಚ ಕಮಿಟಿ ಆಶ್ರಯದಲ್ಲಿ ನಗರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತಿ ಉತ್ಸವ ಸಡಗರ-ಸಂಬ್ರಮದ ಮಧ್ಯೆ ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ಭೀಮನಗರದಿಂದ ಐತಿಹಾಸಿಕ ಕೋಟೆ, ಗಾಂಧಿ ವೃತ್ತದ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ವಿಶೇಷ ಅಲಂಕೃತ ವಾಹನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಎತ್ತರದ ಬೃಹತ್ ಪ್ರತಿಮೆಯ ಭವ್ಯ ಮೆರವಣಿಗೆ ಅಂಬೇಡ್ಕರ್ ವೃತ್ತದ ವರೆಗೆ ಜರುಗಿತು.
ಮೆರವಣಿಗೆಯ ಉದ್ದಕ್ಕೂ ಹೈಸೌಂಡ್ ಸಿಸ್ಟಮ್ ಎದುರು ಸಂಘಟನೆಯ ಕಾರ್ಯಕರ್ತರು, ಯುವಕರು ಸಂಗೀತಕ್ಕೆ ಹೆಚ್ಚೆ ಹಾಕಿದರು. ಡಿಜೆ, ಲೇಜಿಮ್, ಡಾಂಡಿಯಾ ಸೇರಿದಂತೆ ಇತರ ಕಲಾ ತಂಡಗಳಿಂದ ಮೆರವಣಿಗೆಯುದ್ಧಕ್ಕೂ ನಡೆದ ಪ್ರದರ್ಶನ ಗಮನ ಸೆಳೆಯಿತು. ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಂಘಟನೆಗಳ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಭೀಮನಗರ ಓಣಿಯಲ್ಲಿ ಡಾ.ಅಂಬೇಡ್ಕರ್ ಅವರ ಬೃಹತ್ ಪ್ರಗತಿಗೆ ಪೂಜೆ ನೇರವೇರಿಸಿ, ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ದಲಿತ ಪ್ಯಾಂಥರ ತಾಲೂಕು ಅಧ್ಯಕ್ಷ ರವಿ ಗಾಯಕವಾಡ ಚಾಲನೆ ನೀಡಿದರು. ಮುಖಂಡ ನರಸಿಂಗರಾವ ಕಾಂಬಳೆ, ನಾಗನಾಥ ಗಜರೆ, ವಿನೋದ ಜಾಧವ, ವಿನೋದ ಶಿಂಧೆ, ಶಿವಾಜಿ ಸಿಂಧೆ, ನಗರಸಭೆ ಸದಸ್ಯ ಪವನ್ ಗಾಯಕವಾಡ ಸೇರಿದಂತೆ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.
ಧ್ವಜಾರೋಹಣ: ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತೋತ್ಸವ ನಿಮಿತ್ತ ಬೆಳಿಗ್ಗೆ ಭೀಮನಗರ ಓಣಿಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ. ಡಾ. ಬಿ.ಆರ್. ಅಂಬೇಡ್ಕರ್ ಚೌಕನಲ್ಲಿ ಪೂಜೆ ಮತ್ತು ಧ್ವಜಾರೋಹಣ ನೇರವೇರಿಸಲಾಯಿತು.