ಡಾ: ಬಸವರಾಜ ಜಿ. ಪಾಟೀಲ ಅಷ್ಟೂರ ಅವರ ಅಭಿನಂದನಾ ಹಾಗೂ ಗೌರವ ಸನ್ಮಾನ

ಬೀದರ :ಮಾ.31: ನಗರದ ಬಿ.ವಿ. ಭೂಮರಡ್ಡಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆವರಣದಲ್ಲಿ ಬಿ.ವಿ. ಭೂಮರಡ್ಡಿ ಪದವಿ, ಪದವಿ ಪೂರ್ವ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಶ್ರೀ ಶರಣ ಬಸವೇಶ್ವರ ಅಭ್ಯಾಸಾರ್ಥ ಪ್ರೌಢಶಾಲೆ ಹಾಗೂ ನ್ಯಾಷನಲ್ ಇಂಗ್ಲೀಷ ಮಿಡಿಯಮ್ ಪಬ್ಲಿಕ್ ಸ್ಕೂಲ್ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಹಯೋಗದೊಂದಿಗೆ ಡಾ: ಬಸವರಾಜ ಜಿ. ಪಾಟೀಲ ಅಷ್ಟೂರ ಅವರ ಅಭಿನಂದನಾ ಹಾಗೂ ಗೌರವ ಸನ್ಮಾನ ಸಮಾರಂಭ 26ನೇ ಮಾರ್ಚ 2021 ಶುಕ್ರವಾರ, ಸಾಯಂಕಾಲ 6.30 ಗಂಟೆಗೆ ನೆರವೇರಿತ್ತು.
ಡಾ: ಬಸವರಾಜ ಜಿ. ಪಾಟೀಲ ಅಷ್ಟೂರ ಅವರು ಮೂಲತ: ವೈದ್ಯರು ಆದರೆ ಅವರು ಶಿಕ್ಷಣ ಪ್ರೇಮಿಗಳು ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಗೈದಿದ್ದಾರೆ. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 30 ವರ್ಷಗಳಿಂದ ಆಡಳಿತ ಮಂಡಳಿ ಸದಸ್ಯರಾಗಿ ಹಾಗೂ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಆಡಳಿತಾವಧಿಯಲ್ಲಿ ಬಿ.ವಿ. ಭೂಮರಡ್ಡಿ ಹಾಗೂ ಕರ್ನಾಟಕ ಪದವಿ ಮಹಾವಿದ್ಯಾಲಯಗಳು ನ್ಯಾಕ್ ಸಂಸ್ಥೆಯಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದ ಮಹಾವಿದ್ಯಾಲಯಗಳಾಗಿ ಗುರುತಿಸಲ್ಪಟ್ಟವು. ಅವರು ನೇರ, ದೀಟ್ಟ, ಧನಾತ್ಮಾಕ ಚಿಂತನೆಯುಳ್ಳವರಾಗಿದ್ದು ಯಾವಾಗಲು ಶಾಂತ ಸ್ವಭಾವ ಹಸನಮುಖಿಗಳಾಗಿದ್ದಾರೆ. ಶಿಕ್ಷಣ ಕ್ಷೇತ್ರ ಅಲ್ಲದೇ ರಾಜಕಾರಣದಲ್ಲಿಯು ಎತ್ತಿದ ಕೈ ಅವರು ಬೀದರ ಜಿಲ್ಲೆಯ ನಾಗರೀಕ ಸಮಿತಿಯ ಅಧ್ಯಕ್ಷರು ಆಗಿರುತ್ತಾರೆ, ಅಲ್ಲದೇ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಸಮಾರಂಭದಲ್ಲಿ ಹಿರಿಯ ನಿವೃತ್ತ ಪ್ರಾಂಶುಪಾಲರುಗಳಾದ ಪ್ರೊ: ಎಸ್.ಜಿ. ಪಾಟೀಲ ಹಾಗೂ ಪ್ರೊ: ದೇವೇಂದ್ರ ಕಮಲ್ ಇವರುಗಳು ಸನ್ಮಾನಿತರು ನಡೆದ ಬಂದ ದಾರಿ ಹಾಗೂ ಅವರ ವಿದ್ಯಾರ್ಥಿ ಜೀವನ ಕುರಿತು ಮಾತನಾಡಿದರು, ಗುರುಗಳು ತಮ್ಮ ವಿದ್ಯಾರ್ಥಿಯ ಅಭಿನಂದನಾ ಸಮಾರಂಭದಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವೆಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕರಾದ ಸಿದ್ರಾಮಪ್ಪ ಮಾಸಿಮಾಡೆ, ಶ್ರೀ ಬಾಬು ದಾನಿ, ಹಾಗೂ ಡಾ: ಮಲ್ಲಿಕಾರ್ಜುನ ಕನ್ನಕಟ್ಟೆ, ಪ್ರೊ: ಅನೀಲಕುಮಾರ ಅಣದೂರೆ, ಶ್ರೀಮತಿ ಶ್ರೀ ಲತಾ ಹಾಗೂ ಡಾ: ಎಸ್.ಕೆ. ಸಾತನೂರ ಅವರುಗಳು ಸನ್ಮಾನಿತರ ಬಗ್ಗೆ ಅವರೊಂದಿಗಿರುವ ಆಡಳಿತದಲ್ಲಿನ ಒಡನಾಟ ಕುರಿತು ವಿಸ್ತಾರವಾಗಿ ಮಾತನಾಡಿದರು.
ಗೌರವ ಸನ್ಮಾನ ಸ್ವೀಕರಿಸಿ ಸಮಾರಂಭವನ್ನುದ್ದೇಶಿಸಿ ಸುಧೀರ್ಘವಾಗಿ ಮಾತನಾಡಿದ ಡಾ: ಬಸವರಾಜ ಜಿ. ಪಾಟೀಲ ಅವರು ಶಿಕ್ಷಣ ಕ್ಷೇತ್ರ ಅತೀ ಮಹತ್ವದಾಗಿದೆ. ಹಾಗಾಗಿ ನಾವೇಲ್ಲರೂ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ತಿಳಿದು ನ್ಯಾಯಯುತವಾಗಿ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಸರ್ವೋತೋಮುಖ ಬೆಳವಣಿಗೆಗಾಗಿ ಶ್ರಮಿಸಬೇಕೆಂದು ನುಡಿದರು.
ಸಮಾರಂಭದಲ್ಲಿ ಉಪ ಪ್ರಾಂಶುಪಾಲರಾದ ಡಾ: ಎಸ್.ಬಿ. ಗಾಮಾ ಸ್ವಾಗತ ಕೋರಿದರು, ನ್ಯಾಷನಲ್ ಇಂಗ್ಲೀಷ ಮೆಡಿಯಮ್ ಶಾಲೆಯ ಶಿಕ್ಷಕಿ ವೃಂದದವರು ಸನ್ಮಾನಿತರ ಕುರಿತು ಗೀತೆ ಪ್ರಸ್ತುತ ಪಡಿಸಿದರು. ಶ್ರೀಮತಿ ಶೈಲಜಾ ಸಿದ್ದವೀರ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದರು. ಡಾ: ದೀಪಾ ರಾಗ ಅವರು ವಂದಿಸಿದರು.
ಸಮಾರಂಭದಲ್ಲಿ ಸನ್ಮಾನಿತರ ಪತ್ನಿ ಶ್ರೀಮತಿ ಉಮಾ ಪಾಟೀಲ, ಮಗಳು – ಅಳಿಯ ಹಾಗೂ ಮೊಮ್ಮಕ್ಕಳು ಪಾಲ್ಗೊಂಡಿದ್ದರಲ್ಲದೇ ಮಹಾವಿದ್ಯಾಲಯ ಹಾಗೂ ವಿವಿಧ ಶಾಲಾ ಕಾಲೇಜುಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ನಿವೃತ್ತ ಪ್ರಾಂಶುಪಾಲರು – ಪ್ರಾಧ್ಯಾಪಕರು – ಸಿಬ್ಬಂದಿ ವರ್ಗದರು ಹಾಗೂ ಹಿತೈಸಿಗಳು ಉಪಸ್ಥಿತರಿದ್ದರೆಂದು ಸಿಬ್ಬಂದಿ ಕಾರ್ಯದರ್ಶಿಗಳಾದ ಪ್ರೊ: ಪ್ರಶಾಂತ ಸಿದ್ದಗೊಂಡ ತಿಳಿಸಿದರು.