ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನಾಚರಣೆ ಆಚರಣೆ

ತಾಳಿಕೋಟೆ:ಜು.3: ಪಟ್ಟಣದ ಎಸ್.ಕೆ.ಪ್ರೌಢ ಶಾಲೆಯಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಎಸ್.ವ್ಹಿ.ಬೆನಕಟ್ಟಿ ಅವರು ಡಾ.ಫ.ಗು.ಹಳಕಟ್ಟಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಧ್ಯಾರ್ಥಿಗಳಿಗೆ ಹಳಕಟ್ಟಿಯವರ ಜೀವನ ಚರಿತ್ರೆಯನ್ನು ವಿವರಿಸಿದರು.

ಈ ಸಮಯದಲ್ಲಿ ಶಿಕ್ಷಕರಾದ ಆರ್.ಎಸ್.ಬೂದಿಹಾಳ, ಜೆ.ಎಸ್.ಕಟ್ಟಿಮನಿ, ಸುನೀಲ ಪಾಟೀಲ, ಮೊದಲಾದವರು ಇದ್ದರು.