ಡಾ. ಪ್ರವೀಣಕುಮಾರ ಬಗಲಿಯವರಿಗೆ ಪಿ.ಎಚ್.ಡಿ. ಪ್ರಧಾನ

ವಿಜಯಪುರ, ನ.20-ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪಿ.ಎಚ್.ಡಿ. ವಿಭಾಗದಿಂದ ಡಾ. ಪ್ರವೀಣಕುಮಾರ ಎಚ್. ಬಗಲಿ, ಬಿಜಾಪುರ ಇವರು ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ ಎ.ಎಸ್. ಇವರ ಮಾರ್ಗದರ್ಶನದಲ್ಲಿ “ಟು ಇವ್ಯಾಲುಯೇಟ್ ದ ಎಫಿಕೇಸಿ ಆಪ್ ನಸ್ಯ ವಿಥ್ ಮಹಾಮಶಾ ತೈಲ ಆಂಡ್ ನಸಪಾನ ವಿಥ್ ದಶಮೂಲಿ ಬಲಾನಮಾಶ ಕ್ವಾತ ಇನ್ ದ ಮ್ಯಾನೇಜಮೆಂಟ್ ಆಷ್ ಅವಬಾಹುಕ ವಿಥ್ ರೆಸ್ಪೆಕ್ಟ್ ಟು ಪ್ರೋಜನ್ ಶೋಲ್ಡರ್ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ರಾಜೀವ ಗಾಂದಿ ಆರೋಗ್ಯ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪ್ರಧಾನ ಮಾಡಿದೆ. ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.