ಡಾ. ಪ್ರಭಾ ಮಲ್ಲಿಕಾರ್ಜುನ್ ರಿಂದ ಪಿಜೆ ಬಡಾವಣೆಯಲ್ಲಿ ಪ್ರಚಾರ

ದಾವಣಗೆರೆ.ಏ.೧೧; ನಗರದ ಪಿಸಾಳೆ ಕಾಂಪೌಂಡ್ ನಲ್ಲಿರುವ ಗುಳ್ಳಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ  ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಡಾ. ಪ್ರಭಾ ಮಲ್ಲಿಕಾರ್ಜುನ ರವರು  ಪಕ್ಷದ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ್ ರವರ ಪರವಾಗಿ ರೈತರ ಬೀದಿ , ಪಿಸಾಳೆ ಕಾಂಪೌಂಡ್ ಪಿಜಿ ಬಡಾವಣೆ  ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ  ಮನೆ ಮನೆ ಪ್ರಚಾರ ಮಾಡಿದರು.  ಈ ಸಂದರ್ಭದಲ್ಲಿ  ವಾರ್ಡಿನ   ಮಾಜಿ ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ , ಲತೀಕ ದಿನೇಶ್ ಕೆ ಶೆಟ್ಟಿ,  ಮಾಜಿ ಮೇಯರ್ ಅನಿತ ಬಾಯಿ, ಡಾ. ಶಾಂತಲಾ, ವಿನುತಾ ,ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಎಂ. ಮನು, ಉತ್ತರ ವಲಯ  ಮಹಿಳಾ  ಅಧ್ಯಕ್ಷ ರಾಜೇಶ್ವರಿ, ದ್ರಾಕ್ಷಣಮ್ಮ , ವಾರ್ಡ್ ಅಧ್ಯಕ್ಷ ಮಧು, ವಾರ್ಡಿನ ಮುಖಂಡರಾದ ವೆಂಕಟೇಶ್ , ಯುವರಾಜ್ , ಪರಶುರಾಮ್ , ಪಂಚಪ್ಪ ,  ಸರಳ, ಸಹನಾ , ಗಿರಿಜಮ್ಮ , ಸವಿತಾ, ಆಶಾ,ರಾಗಿಣಿ , ಗೀತಾ ,  ಸುನಂದಮ್ಮ,  ಅಂಕಿತ, ದೀಪ ,  ಅಂಬಿಕಾ ಪದ್ಮ, ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ  ಹರೀಶ್ ಬಸಾಪುರ   ಕಾರ್ಯಕರ್ತರು ಹಾಗೂ ಎಸ್ ಎಸ್ ಹಾಗೂ ಎಸ್ಎಸ್ಎಂ ಅಭಿಮಾನಿಗಳು, ವಾರ್ಡಿನ ಮುಖಂಡರು ಕಾರ್ಯಕರ್ತರು  ಉಪಸಿತರಿದ್ದರು.