ಡಾ. ಪೆರ್ಲ ಕೃತಿಗೆ ನಳಿನ್ ಮೆಚ್ಚುಗೆ

ಕಲಬುರಗಿ:ಜೂ.24:ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕಲಬುರ್ಗಿ ಆಕಾಶವಾಣಿ ವಿಶೇಷವಾಗಿ ಆಯೋಜಿಸಿ ಬಿತ್ತರಿಸಿದ ಸರಣಿ ಉಪನ್ಯಾಸಗಳನ್ನು ಕೃತಿ ರೂಪದಲ್ಲಿ ಓದುಗರಿಗೆ ನೀಡಿರುವುದು ಹೆಗ್ಗಳಿಕೆ ಮತ್ತು ಸ್ವಾತಂತ್ರ್ಯದ ಇತಿಹಾಸದ ಗಾಥೆಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಅತ್ಯುತ್ತಮ ಪ್ರಯತ್ನ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು ಶ್ಲಾಘಿಸಿದರು.
ಕಲಬುರ್ಗಿಗೆ. ಇತ್ತೀಚೆಗೆ ಕಲಬುರ್ಗಿಗೆ ಭೇಟಿ ನೀಡಿದ ಸಂದರ್ಭದಲ್ಲಿಆಕಾಶವಾಣಿಯ ಹಿರಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಮತ್ತು ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಕೃತಿ ನೀಡಿ ಗೌರವಿಸಿದರು. ಕೃತಿ ಹೊರ ತರಲು ಕಾರಣರಾದ ಹಿರಿಯರಾದ ಡಾಕ್ಟರ್ ಬಸವರಾಜ ಪಾಟೀಲ್ ಸೇಡಂ ಅವರು ಕೂಡ ಅಭಿನಂದನಾ ರ್ಹರು ಎಂದರು. ಈ ಸಂದರ್ಭದಲ್ಲಿಜಿಲ್ಲಾ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ನರಸಿಂಹ ಮೆಂಡನ್,ಸಂಘದ ಕ್ರೀಡಾ ಕಾರ್ಯದರ್ಶಿ ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು.