ಡಾ.ಪುನೀತ ರಾಜಕುಮಾರ ಅವರ ಮೂರ್ತಿ 29.ರಂದು ಪ್ರತಿಷ್ಠಾಪನೆ

ಕಲಬುರಗಿ,ಆ.16: ಡಾ.ಪುನಿತ ರಾಜಕುಮಾರ ಸಂಘದ ವತಿಯಿಂದ ದೊಡ್ಡಮನೆ ಹುಡುಗ ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರಾಜಕುಮಾರ ಗುಂಡಪ್ಪ ಹೆಬ್ಬಾಳಕ ಅವರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅ. 29.ರಂದು ಡಾ. ಪುನೀತ ರಾಜಕುಮಾರ ಅವರ ಪುಣ್ಯಸ್ಮರಣೆ ಇರುವ ಕಾರಣ ಹೊಸಪೇಟ್ ಮಾದರಿಯಂತೆ ಕಲಬುರಗಿ ಮಹಾನಗರ ಪಾಲಿಕೆ ಹಿಂದಿನ ಗೇಟ್ ಎದುರುಗಡೆ ಹಾಗೂ ಸ್ವಾಗತ ಬುಕ್ಕೆ ಅಂಗಡಿ ಎದುರುಗಡೆ ಇರುವ ಮುಖ್ಯ ರಸ್ತೆ ಡಿವೈಡರ್ ಮೇಲೆ 55 ಅಳತೆಯ ಸ್ಥಳದಲ್ಲಿ ಡಾ. ಪುನೀತ ರಾಜಕುಮಾರ ಅವರ ಮೂರ್ತಿ ಪ್ರತಿಷ್ಠಾಪನೆಗೆ ತಾವು ಅನುಮತಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.