
ನಿನ್ನೆ ರಂಗಮಂದಿರ ಉದ್ಘಾಟನೆ: ಇಂದು ಪೋಲಿಸ್ ಸರ್ಪಗಾವಲು
ಸಿಂಧನೂರು,ಮಾ.೧೪- ರಂಗಮಂದಿರಕ್ಕೆ ಡಾ. ಪುನೀತ್ ರಾಜಕುಮಾರ್ ಪುತ್ಥಳಿ ತೆಗೆದುಕೊಂಡು ಮೆರವಣಿಗೆಯಲ್ಲಿ ಹೋಗುವಾಗ ಪೋಲಿಸರು ತಡೆದಾಗ ಅಪ್ಪು ಅಭಿಮಾನಿಗಳು ಹಾಗೂ ಪೋಲಿಸರ ಮದ್ಯ ತಳ್ಳಾಟ ನಡೆದ ಘಟನೆ ಇಂದು ನಡೆಯಿತು.
ಪರಿಸ್ಥಿತಿ ಕೈಮೀರುವದನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರು ಜಮಾವಣೆ ಗೊಂಡು ಮೆರವಣಿಗೆ ಅವಕಾಶ ನೀಡದೆ ತಡೆದಿದ್ದು ಅಪ್ಪು ಅಭಿಮಾನಿಗಳು ಪೋಲಿಸರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಅದ್ದೂರಿಯಾಗಿ ಉದ್ಘಾಟನೆಯಾದ ರಂಗಮಂದಿರ ಸುತ್ತ ಮುತ್ತ ಪೋಲಿಸರ ಸರ್ಪಗಾವಲು ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರನ್ನು ನಿಯೋಜನೆ ಮಾಡಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸದ್ಯ ರಂಗಮಂದಿರಕ್ಕೆ ಟೌನ್ ಹಾಲ್ ಎಂದು ಹೆಸರು ಇಟ್ಟು ಶಾಸಕ ನಾಡಗೌಡ ಉದ್ಘಾಟನೆ ಮಾಡಿದರು. ಎಲ್ಲವು ಸರಿಯಾಗಿ ನಡೆಯಿತು ಎನ್ನುಸ್ಟರಲ್ಲಿ ಇಂದು ರಂಗಮಂದಿರಕ್ಕೆ ವಿಘ್ನ ಎದುರಾಯಿತು.
ಶಾಸಕ ವೆಂಟರಾವ ನಾಡಗೌಡರ ಪುತ್ರ ಅಭಿಶೇಷ ನಾಡಗೌಡ ನೂರಾರು ಅಪ್ಪು ಅಭಿಮಾನಿಗಳ ಜೊತೆ ನಗರದ ಗಣೇಶ ಗುಡಿಯಿಂದ ಅಪ್ಪು ಪುತ್ಥಳಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ತರುವಾಗ ಸಿಪಿಐ ರವಿಕುಮಾರ ಪಿಎಸ್‌ಐ ಮಣಿಕಂಠ ನೇತೃತ್ವದ ಪೋಲಿಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಬಂದು ರಂಗಮಂದಿರಕ್ಕೆ ಮೆರವಣಿಗೆ ಅವಕಾಶ ಕೊಡದೆ ತಡೆದಾಗ ಪೋಲಿಸರು ಹಾಗೂ ಅಭಿಮಾನಿಗಳ ಮದ್ಯ ಗಲಾಟೆ ನಡೆದು ಪಿಎಸ್‌ಐ ಮಣಿಕಂಠ ಅಭಿಮಾನಿ ಮೇಲೆ ಹಲ್ಲೆ ಮಾಡಿದರು ಎಂದು ರೊಚ್ಚಿಗೆದ್ದ ಅಭಿಮಾನಿಗಳು ಪಿಎಸ್‌ಐ ಮಣಿಕಂಠರನ್ನು ಎಳೆದಾಡಿದ ಪ್ರಸಂಗವು ನಡೆಯಿತು.
ನಾನು ಯಾರ ಮೇಲೆ ಹಲ್ಲೆ ಮಾಡಿಲ್ಲ. ವಾಹನ ಕೆಳಗಡೆ ಯುವಕನೊಬ್ಬ ಬಿದ್ದಿದ್ದು ಆತನನ್ನು ರಕ್ಷಣೆ ಮಾಡಲು ಹೋಗಿದ್ದೆ ಎಂದು ಸಮಜಾಯಿಷಿ ನೀಡಿದರು. ಅಭಿಮಾನಿಗಳು ಕೇಳದೆ ಅವರ ಅಮಾನತ್ತಿಗೆ ಅಗ್ರಹಿಸಿ ಪ್ರತಿಭಟನೆ ನಡೆಸಿದರು. ಸಿಪಿಐ ರವಿಕುಮಾರ ಶಾಸಕರ ಪುತ್ರ ಅಭಿಶೇಷ ನಾಡಗೌಡರನ್ನು ಬಂಧಿಸಲು ಬಂದಾಗ ಯಾವ ಕಾರಣಕ್ಕೆ ನನ್ನನ್ನು ಬಂಧಿಸುತ್ತಿರಿ ಎಂದಾಗ ಮತ್ತೆ ಗಲಾಟೆ ನಡೆಸಿದರು.
ಮೆರವಣಿಗೆ ಮಾಡಿ ಅದಕ್ಕೆ ನಮ್ಮ ತಕರಾರು ಇಲ್ಲ ಯಾವುದೆ ಕಾರಣಕ್ಕೂ ರಂಗಮಂದಿರಕ್ಕೆ ಹೋಗಲು ಬಿಡುವುದಿಲ್ಲ ಎಂದು ಪೋಲಿಸರು ಹೇಳಿದಾಗ ಮೆರವಣಿಗೆ ನಡೆಸಿದರು.
ಇಡೀ ರಾಜ್ಯದಾದ್ಯಂತ ಅಪ್ಪು ಅಭಿಮಾನಿಗಳು ಇದ್ದು, ಅವರ ಪ್ರತಿಮೆ ಅನಾವರಣಕ್ಕೆ ವಿರೋಧ ವ್ಯಕ್ತವಾಗಿಲ್ಲ. ಆದರೆ ಸಿಂಧನೂರಿನಲ್ಲಿ ಅಪ್ಪು ಪುತ್ಥಳಿ ಅನಾವರಣ ಮಾಡಲು ಅವಕಾಶ ಕೊಡದೆ ವಿರೋಧ ಮಾಡಿದ್ದು ರಾಜ್ಯದಲ್ಲಿ ಸಿಂಧನೂರು ಪ್ರಥಮ ಘಟನೆಯಾಗಿದೆ. ಅಪ್ಪು ಪುತ್ಥಳಿಯನ್ನು ನಾವು ರಂಗಮಂದಿರದಲ್ಲಿ ಅನಾವರಣ ಮಾಡೆ ಮಾಡುತ್ತೇವೆ ಎಂದು ಪಟ್ಟು ಇಡಿದಿದ್ದು, ಇದರಿಂದ ಪೋಲಿಸರಿಗೆ ತಲೆ ನೋವಾಗಿದೆ.
ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಸಭೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳುವ ತನಕ ಅನಾವರಣ ಬೇಡ ಎಂದು ಅಪ್ಪು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು ಯಾವುದೆ ಪ್ರಯೋಜನೆಯಾಗಲಿಲ್ಲ. ಮುಂದೆ ಏನಾಗುತ್ತದೆ ಕಾಯ್ದು ನೋಡಬೇಕಾಗಿದೆ.