ಡಾ.ಪುನೀತ್ ರಾಜಕುಮಾರ್‌ರವರ ಹುಟ್ಟುಹಬ್ಬ

ರಾಯಚೂರು,ಮಾ.೧೯- ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬವನ್ನು ರಾಯಚೂರು ಮನೋರಂಜನ ಕೇಂದ್ರದಲ್ಲಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಡಾ.ರಾಜಕುಮಾರ್ ಸದ್ಬಾವನಾ ಪ್ರಶಸ್ತಿ ಪುರಷ್ಕೃತರಾದ ಡಾ. ದಂಡಪ್ಪ ಬಿರಾದಾರ್ ಮಾತನಾಡುತ್ತಾ, ಕನ್ನಡ ಚಲನಚಿತ್ರ ರಂಗದಲ್ಲಿ ಪುನೀತ್ ರಾಜಕುಮಾರ್ ಅವರ ನಟನೆ ಹಚ್ಚು ಹಸಿರಾಗಿದೆ. ಇವರು ಬಾಲ್ಯದಲ್ಲಿಯೇ ಬೆಟ್ಟದ ಚಿತ್ರದಲ್ಲಿ ನಟನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಂತ ಮೆರುನಟ. ಇವರು ಚಲನಚಿತ್ರ ರಂಗದ ಜೊತೆಗೆ ಹಲವಾರು ಅನಾಥಾಶ್ರಮಗಳು ಸಹಾಯಮಾಡಿ . ಸಾಮಾಜಿಕ ಸೇವೆಯನ್ನು ಮಾಡಿ ಆಕಾಶದಲ್ಲಿ ಸಾವಿರಾರು ನಕ್ಷತ್ರಗಳು ಇವೆ ಈ ಭೂಮಿ ಮೇಲೆ ಪವರ್ ಸ್ಟಾರ್ ಪುನೀತ್ ನಮ್ಮೆಲ್ಲರಿಗೆ ಸ್ಟಾರ್ ಎಂದು ಹೇಳಿದರು.
ನಂತರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಂಡಾರಿ ಹಾಸ್ಪಿಟಲ್‌ನ ಆಡಳಿತ ಅಧಿಕಾರಿ ಡಾ. ರಿಯಾಜುದ್ದೀನ್ ರವರು ಮಾತನಾಡುತ್ತಾ, ಪುನೀತ್ ರಾಜಕುಮಾರ್ ಅವರ ನಟನೆ ಅವರ ಸಾಮಾಜಿಕ ಸೇವೆ ಅವರು ಮಾಡಿದ ಕಾರ್ಯಗಳ ಕುರಿತು ಮುಕ್ತವಾಗಿ ಮಾತನಾಡಿದರು.
ನಂತರ ಪವರ್ ಸ್ಟಾರ್ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಅಂಗವಾಗಿ ಕೆಕ್ ಕತ್ತರಿಸಿ ಎಲ್ಲಾ ಕಲಾವಿದರಿಗೂ ಮತ್ತು ಸಭಿಕರಿಗೂ ಹ೦ಚಲಾಯಿತು. ಈ ಕಾರ್ಯಕ್ರಮದಲ್ಲಿ ಜಿತೇಂದ್ರ ಆರ್ಯ, ಡಾ.ಆನಂದ್ ಜಮಾಲ್ ಪಾಶ, ಬಸವರಾಜ್, ಸಿದ್ದೇಶವಿರಕ್ತಮಠ, ತಿಮ್ಮಣ್ಣ ನಿವೃತ್ತ ಮುಖ್ಯ ಗುರುಗಳು ಸೇರಿದಂತೆ ಹಲವಾರು ಗಣ್ಯರು ವೇದಿಕೆ ಮೇಲಿದ್ದರು.
ನಂತರ ಮೊಹನ್ ವಕೀಲರು, ನರೇಂದ್ರ ಕುಮಾರ್, ರೂಪಶ್ರೀ ಬೆಂಗಳೂರು, ಮೇಘ ಸಿದ್ಧಿಕಿ ವಕೀಲರು, ಅಕ್ಕಮಹಾದೇವಿ, ಡಾ.ಅನಿಲ್ ರವರು ಸೇರಿದಂತೆ ಹಲವಾರು ಗಾಯಕರು ಸುಮಧುರವಾದ ಗೀತೆಗಳನ್ನು ಹಾಡಿ ಸಭಿಕರ ಮನಸ್ಸನ್ನು ಸೂರೆಗೊಂಡರು. ಮೇಘನಾ ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು.