ಡಾ. ಪುನೀತ್ ಅಭಿಮಾನಿಗಳಿಂದ ಹಣ್ಣು ಬ್ರೇಡ್ ವಿತರಣೆ

ಅರಕೇರಾ,ಮಾ.೧೮- ಡಾ. ಪುನೀತ್ ರಾಜುಕುಮಾರ್ ನೊಂದವರ ಬಡವರ ನಿರ್ಗತಿಕರ ಅಸಂಘಟಿತ ಕಷ್ಟಕ್ಕೆ ಸ್ಪಂದಿಸಿದ್ದರು ಎಂದು ಸಮಾಜ ಸೇವಕಮಹಾಂತೇಶಪೂಜಾರಿ ಹೇಳಿದರು.
ಅವರು ಅರಕೇರಾ ಪಟ್ಟಣದಲ್ಲಿ ಡಾ.ಪುನೀತ್ ರಾಜುಕುಮಾರ್ ವೃತ್ತದಲ್ಲಿ ಅಪ್ಪು ೪೯ನೇ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ ಹಾಗೂ ಜನರಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು. ಅಪ್ಪು ಕರ್ನಾಟಕದ ಮನೆ ಮನಗಳ ನಂದಾದೀಪವಾಗಿದ್ದಾರೆ. ದೈಹಿಕವಾಗಿ ಅವರು ಮರೆಯಾಗಿರಬಹುದು. ಸದಾ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಸುವಂತ ಕೆಲಸಗಳು ಮಾಡಿದ್ದಾರೆ ಎಂದರು ಇದೇ ಸಂದರ್ಬದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡರೋಗಿಗಳಿಗೆ ಹಣ್ಣು ಬ್ರೇಡ್ ಬೀಸ್ಕೇತ್ ವಿತರಣೆಮಾಡಲಾಯಿತು.
ಸಂದರ್ಭದಲ್ಲಿ ಹನುಮಂತ್ರಾಯಪೂಜಾರಿ, ಸಿದ್ದಯ್ಯಸ್ವಾಮಿಮಠಪತಿ, ತನುಜ್ ಕುಮಾರ, ರಂಗನಾಥಪೂಜರಿ,ನಾಗರಾಜದೇವರಮನಿ, ತಿಮ್ಮಣ್ಣನಾಯಕಜಲ್ಲೆ ಬಸವರಾಜಗುತ್ತೇದಾರ, ಕ್ರೀಷ್ಟಪ್ಪಡೈವರ, ಹನುಮಂತ್ರಾಯನಾಯಕ ಗುಜಪ್ ಇಬ್ರಾಹಿಂಸಾಬ, ಇಮ್ರಾನ, ಜಾಕೀರ್ ಡ್ರೈವರ ಮುಂತಾದವರು ಉಪಸ್ಥಿತರಿದ್ದರು.