ಡಾ.ಪುಟ್ಟಪ್ಪನವರ ಕೆಲಸ, ಕಾರ್ಯಗಳು ದಾರಿದೀಪ

ಧಾರವಾಡ,ಜ16: ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದಕರ್ನಾಟಕ ಶಕ್ತಿ ಕೇಂದ್ರವಾದಕರ್ನಾಟಕ ವಿದ್ಯಾವರ್ಧಕ ಸಂಘದಅಧ್ಯಕ್ಷರಾಗಿ 52 ವರ್ಷಗಳಿಗಿಂತ ಹೆಚ್ಚುಕಾಲ ಅಧ್ಯಕ್ಷರಾಗಿ ಸಂಘವನ್ನು ಬೆಳೆಸುತ್ತಾ ಮುನ್ನಡೆಸುವುದರಜೊತೆಗೆಅಖಂಡಕರ್ನಾಟಕದಕನಸನ್ನುಕಂಡುಕರ್ನಾಟಕದಎಕೀಕರಣಕ್ಕಾಗಿ ಶ್ರಮಿಸಿ, ಸಂಘದ ಮುಖಾಂತರಕನ್ನಡ, ಕರ್ನಾಟಕದ ಸಮಗ್ರ ಏಳ್ಗೆಗಾಗಿ ಕೆಲಸ ಮಾಡಿದ ಪುಟ್ಟಪ್ಪನವರುಇವತ್ತು ನಮ್ಮೊಂದಿಗೆಇಲ್ಲವಾದರೂಅವರು ಮಾಡಿದ ಕೆಲಸ ಕಾರ್ಯಗಳು ನಮಗೆ ದಾರಿದೀಪವಾಗಿವೆಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ ನಾಡೋಜಡಾ.ಪಾಟೀಲ ಪುಟ್ಟಪ್ಪಅವರ 104ನೇ ಜನ್ಮದಿನಾಚರಣೆಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ವಿದ್ಯಾರ್ಥಿದೆಸೆಯಿಂದಲೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದಡಾ|| ಪಾಟೀಲ ಪುಟ್ಟಪ್ಪಅವರುಗಾಂಧೀಜಿಅವರಿಂದ ಪ್ರೇರೆಪಿತರಾಗಿ ನಿಜಲಿಂಗಪ್ಪನವರಒಡನಾಡಿಯಾಗಿ ಸಾಕಷ್ಠು ಕನ್ನಡದ ಕೆಲಸ ಮಾಡಿದ್ದಾರೆ.ಕನ್ನಡ ಕಾವಲು ಮತ್ತುಗಡಿಅಭಿವೃದ್ದಿ ಪ್ರಾಧಿಕಾರದಅಧ್ಯಕ್ಷರಾಗಿಇಡೀಕರ್ನಾಟಕವನ್ನು ಸುತ್ತಿದ್ದಾರೆ.ಕನ್ನಡ, ಕರ್ನಾಟಕ ಏನು ಮಾಡಬೇಕುಎಂಬುದರ ಬಗ್ಗೆ ಸರ್ಕಾರಕ್ಕೆ ಸೂಚಿಸಿದ ವ್ಯಕ್ತಿಡಾ|| ಪಾಟೀಲ ಪುಟ್ಟಪ್ಪನವರು.ಇಂಥವರಜೊತೆಗೆ ನಾವು ನೀವೆಲ್ಲ ಕೆಲಸ ಮಾಡಿದ್ದೆವೆಎಂಬುದು ನಮ್ಮ ಭಾಗ್ಯವೆಂದರು.
ಸಭೆಯಅಧ್ಯಕ್ಷತೆ ವಹಿಸಿದ್ದ ಸಂಘದಕಾರ್ಯಾಧ್ಯಕ್ಷರಾದ ಬಸವಪ್ರಭು ಹೊಸಕೇರಿ ನಾಡೋಜಡಾ||ಪಾಟೀಲ ಪುಟ್ಟಪ್ಪಅವರು ನಮಗೆ ಎಷ್ಟು ಪ್ರಸ್ತುತಎಂಬುದುಅವರುಇಲ್ಲದ ಈ ದಿನಗಳಲ್ಲಿ ನಮಗೆ ಅಷ್ಟೆ ಅಲ್ಲಇಡೀಕರ್ನಾಟಕಕ್ಕೆಗೊತ್ತಾಗಿದೆ. ಅವರ ನೇರ ಮತ್ತು ದಿಟ್ಟ ಸ್ಪಷ್ಟ ಮಾತುಗಳು ಎಲ್ಲರನ್ನುಎಚ್ಚರಿಸುತ್ತಿದ್ದವು.ಸತ್ಯಕ್ಕಾಗಿ ಹೋರಾಡುತ್ತಾ, ಕನ್ನಡ ಮತ್ತುಕರ್ನಾಟಕದ ಕೆಲಸಕ್ಕಾಗಿ ಯಾವ ಮುಲಾಜಿಲ್ಲದೇಯಾರ ಭೀತಿಯೂಇಲ್ಲದೇ ಮಾತನಾಡುವ ಧೀಮಂತ ವ್ಯಕ್ತಿಯಾಗಿದ್ದರು.ಸರಕಾರಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಅವರಲ್ಲಿತ್ತು. ನೆಹರುಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಡಾ ಪಾಪು ಅವರುರಾಜ್ಯಸಭಾ ಸದಸ್ಯರಾಗಿಎರಡುಅವಧಿಯಲ್ಲಿದೇಶದ ಕೆಲಸ ಕಾರ್ಯಗಳಿಗೆ ತೊಡಗಿಸಿಕೊಂಡು ಪ್ರಪಂಚ' ವಾರ ಪತ್ರಿಕೆ ಮೂಲಕ ಬದುಕಿನುದ್ದಕ್ಕೂ ಸಮಾಜದಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದರುಎಂಬುದು ಪತ್ರಿಕಾರಂಗದಲ್ಲಿ, ಸರಕಾರದಲ್ಲಿ, ನಾಡಿನಇತಿಹಾಸದಲ್ಲಿದಾಖಲೆಯಾಗಿದೆಎಂಬುದು ಹೆಮ್ಮೆಯ ಸಂಗತಿಎಂದರು. ಆರಂಭದಲ್ಲಿ ಸಂಘದ ಸಂಸ್ಥಾಪಕರಾದ ಶ್ರೀ ರಾ.ಹ.ದೇಶಪಾಂಡೆಅವರ ಪುತ್ಥಳಿಗೆ ಮತ್ತು ನಾಡೋಜಡಾ. ಪಾಟೀಲ ಪುಟ್ಟಪ್ಪಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕೊನೆಯಲ್ಲಿ ಶಿ.ಮ.ರಾಚಯ್ಯನವರ ನಾಡೋಜಡಾ. ಪಾಟೀಲ ಪುಟ್ಟಪ್ಪಅವರನ್ನುಕುರಿತು ರಚಿಸಿದನೂರು ವರ್ಷದಕನ್ನಡ ಪುರುಷ’ ಕವನ ಓದಿದರು.
ಕಾರ್ಯಕ್ರಮದಲ್ಲಿ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಶಂಕರ ಕುಂಬಿ, ವೀರಣ್ಣಒಡ್ಡೀನ, ಗುರು ಹಿರೇಮಠ, ಡಾ.ಶ್ರೀಶೈಲ ಹುದ್ದಾರ, ಡಾ.ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ ಹಾಗೂ ನಿಂಗಣ್ಣಕುಂಟಿ, ಶಿವಾನಂದ ಭಾವಿಕಟ್ಟಿ, ಮಂಜುಳಾ ಹಾರೋಗೊಪ್ಪ, ಅಶೋಕ ಪು. ಪಾಟೀಲ, ಬಿ.ಎಲ್. ಪಾಟೀಲ, ಚಂದೂನವರ, ನಿಂ.ಶಿ.ಕಾಶಪ್ಪನವರ, ಎಂ.ಎಂ.ಚಿಕ್ಕಮಠ, ಮಹಾಂತೇಶ ನರೇಗಲ್ಲ, ಶೇಷರಾಜಗುತ್ತಲ, ಸೈಯ್ಯದ ನರೇಗಲ್ಲ, ಕೂಡಲಪ್ಪ ಮೆಣಸಿನಕಾಯಿ ಮುಂತಾದವರು ಉಪಸ್ಥಿತರಿದ್ದರು.