
ಬೀದರ:ಡಿ.23: 22ನೇ ಡಿ. 2020 ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಎನ್.ಸಿ.ಸಿ. ಅಧಿಕಾರಿಗಳಾದ ಡಾ: ಪಿ. ವಿಠ್ಠಲ ರಡ್ಡಿಯವರಿಗೆ “ಜೈ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ನೇಹಾ ಕಲ್ಚರಲ್ ಮತ್ತು ಸೊಶೀಯಲ್ ಡೆವಲಪಮೆಂಟ ಫೌಂಡೇಷನ್” ವತಿಯಿಂದ ಅಧ್ಯಕ್ಷರಾದ ಶ್ರೀಯುತ ಶ್ರೀಮಂತ ಸಪಾಟೆಯವರು ರಡ್ಡಿಯವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಪರಿಗಣಿಸಿ “ಉತ್ತಮ ಶಿಕ್ಷಕ ಪ್ರಶಸ್ತಿ” ಹಾಗೂ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಅಪ್ಪಾರಾವ ಎಂ ಸೌದಿ ಸೀನಿಯರ ಕರಸ್ಪಾಂಡೆಂಟ್ ಹಾಗೂ ಡಾ: ಎನ್.ಎಸ್. ಕುಲಕರ್ಣಿ ಎಕ್ಷಿಕಿಟಿವ ಕನ್ನಡ ಪ್ರಭಾ, ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೊ: ಅನೀಲಕುಮಾರ ಅಣದೂರೆ, ಪ್ರೊ: ಪಂಕಜ ಬಿ ಮುಸ್ತಾರೆ, ಪ್ರೊ: ನಾಗನಾಥ ಸರೋಡೆ ಹಾಗೂ ಡಾ: ಮಲ್ಲಿಕಾರ್ಜುನ ಕೋಟೆ ಉಪಸ್ಥಿತರಿದ್ದರು.