ಡಾ.ಪಿ.ಎಂ.ಬಿರಾದಾರಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ: ಗಣ್ಯರ ಅಭಿನಂದನೆ

ಕಲಬುರಗಿ,ಮಾ.4-ಖ್ಯಾತ ಚರ್ಮರೋಗ ತಜ್ಞ ಡಾ.ಪಿ.ಎಮ್. ಬಿರಾದಾರ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 2023-24 ಸಾಲಿನ ಗೌರವ ಡಾಕ್ಟರೇಟ್ ಪದವಿ ಪುರಸ್ಕøತರಾಗಿರುವುದಕ್ಕೆ ಅಪಾರ ಸಂತೋಷ ವ್ಯಕ್ತಪಡಿಸಿರುವ ನಾಡೋಜ ಡಾ.ಪಿ.ಎಸ್. ಶಂಕರ, ಎನ್.ಎಸ್.ದೇವರಕಲ್, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್. ಎಸ್. ಗುಬ್ಬಿ, ಕಾರ್ಯದರ್ಶಿ ಎಸ್. ಎಸ್. ಹಿರೇಮಠ, ಹಿರಿಯ ವೈದ್ಯರುಗಳಾದ ಡಾ.ಸಂಗ್ರಾಮ ಬಿರಾದಾರ, ಡಾ.ವಿಶ್ವನಾಥ ರೆಡ್ಡಿ, ಡಾ.ವಿಕ್ರಮ ಸಿದ್ದಾರೆಡ್ಡಿ, ಡಾ.ನಿರ್ಮಲಾ ರಾಂಪುರೆ, ಡಾ.ಎಸ್.ಎನ್. ಪಾಟೀಲ, ಟಿ.ವಿ.ಶಿವಾನಂದನ್, ಶರಣು ಪಪ್ಪು, ಉಮೇಶ್ ಶೆಟ್ಟಿ , ಪೆÇ್ರ.ನರೇಂದ್ರ ಬಡಶೇಷಿ, ಎಮ್. ಸದಾನಂದ ಹಾಗೂ ಮಣಿಲಾಲ ಶಹಾ ಮುಂತಾದವರು ಡಾ.ಬಿರಾದಾರ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಚರ್ಮರೋಗ ಶಾಸ್ತ್ರದ ಅಧ್ಯಯನ, ಅಧ್ಯಾಪನ ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿನ ಡಾ.ಪಿ.ಎಮ್. ಬಿರಾದಾರ ಅವರ ನಾಲ್ಕೂವರೆ ದಶಕಗಳ ಅನುಪಮ ಸೇವೆಯನ್ನು ಗುರುತಿಸಿ ‘ರಾಜೀವ್ ಗಾಂಧಿ’ ಯುನಿವರ್ಸಿಟಿ ಈ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ. ಕರ್ನಾಟಕದ ಅತ್ಯಂತ ಹಿರಿಯ ಹಾಗೂ ಅನುಭವಿ ಚರ್ಮರೋಗ ತಜ್ಞರ ಮೊದಲ ಸಾಲಿನಲ್ಲಿ ಗುರುತಿಸಲ್ಪಡುವ ಡಾ. ಪಿ.ಎಮ್. ಬಿರಾದಾರ ಅವರ ಬಗ್ಗೆ ಇಡೀ ಕಲ್ಯಾಣ ಕರ್ನಾಟಕವೇ ಹೆಮ್ಮೆ ಪಡುತ್ತದೆ ಎಂದು ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಎಸ್.ಎಸ್.ಹಿರೇಮಠ ತಿಳಿಸಿದ್ದಾರೆ.