ಡಾ.ಪಾಟೀಲ ಗೆಲುವು:ಅಶೋಕ್ ಖೇಣಿ ಸಂತಸ

ಬೀದರ್: ಜೂ.8:ಈಶಾನ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾಕ್ಟರ್ ಚಂದ್ರಶೇಖರ್ ಪಾಟೀಲ್ ಹುಮನಾಬಾದ ರವರು ಅಭೂತಪೂರ್ವ ಜಯ ಸಾಧಿಸಿದ್ದಕ್ಕೆ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ್ ಖೇಣಿ ರವರು ಸಂತಸ ವ್ಯಕ್ತಪಡಿಸಿದ್ದಾರೆ.

ಚಂದ್ರಶೇಖರ ಪಾಟೀಲ್ ರವರು ಎರಡನೇ ಬಾರಿಗೆ
ಮೇಲ್ಮನೆ ಪ್ರವೇಶ ಮಾಡಿದ್ದಾರೆ ವಿಧಾನ ಪರಿಷತ್ತಿನಲ್ಲಿ ಕನ್ನಡಿಗರ ಪಧವಿಧರ ಧ್ವನಿ ಎತ್ತಿಹಿಡಿಯುವ ಕೆಲಸ ಮಾಡುತ್ತಾರೆ, ಹಾಗು ಕಲ್ಯಾಣ ಕರ್ನಾಟಕ ಭಾಗದ ಪಧವಿಧರ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಚಂದ್ರಶೇಖರ ಪಾಟೀಲ್ ಪರವಾಗಿ ಮತ ಚಲಾಯಿಸಿದ ಎಲ್ಲಾ ಪಧವಿಧರ ಮತದಾರರಿಗೆ ಧನ್ಯವಾದಗಳು ತಿಳಿಸಿದರು.