ಡಾ.ಪಲ್ಲವಿ ಪಾಟೀಲರವರ ‘ಭಾವಪಲ್ಲವಿ’ ಕೃತಿ ಲೋಕಾರ್ಪಣೆ

ಸೇಡಮ್:ಅ.31: ನವ್ಹೆಂಬರ್ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಾ.ಪಲ್ಲವಿ ಪಾಟೀಲ ಸೇಡಮ್, ಸಿಂಡಿಕೇಟ್ ಸದಸ್ಯರು ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿ ಅವರು ರಚಿಸಿದ ‘ಭಾವ ಪಲ್ಲವಿ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ.

ನಗರದ ಶ್ರೀಮತಿ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಂಜೆ 5-00 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರೊ. ಬಟ್ಟು ಸತ್ಯನಾರಾಯಣ, ಕುಲಪತಿಗಳು, ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ ಕಲಬುರಗಿ ಮತ್ತು ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪ ಉಪಾಧ್ಯಕ್ಷರು, ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಕರ್ನಾಟಕ ಅವರು ಕೃತಿ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಪ್ರಖರ ವಾಗ್ಮಿ, ಹಿರಿಯ ಸಾಹಿತಿಗಳಾದ ಪ್ರೊ..ಬಸವರಾಜ ಡೋಣೂರ ಕುಲಸಚಿವರು ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ, ಕಲಬುರಗಿ ಹಾಗೂ ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಸೇಡಂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ಸೇಡಂ ಯೋಜನಾಧಿಕಾರಿ ಮಂಜುನಾಥ. ಎಸ್.ಜಿ., ಶರಣಬಸ್ಸಪ್ಪ ವೀರಭದ್ರಪ್ಪ ನಿಲಂಗಿ ಆಗಮಿಸಲಿದ್ದಾರೆ. ರಾಜಕುಮಾರ ಪಾಟೀಲ ತೇಲ್ಕೂರ ಶಾಸಕರು & ಅಧ್ಯಕ್ಷರು, ಕ.ಕ.ರ.ಸಾ.ಸಂಸ್ಥೆ/ಡಿ.ಸಿ.ಸಿ. ಬ್ಯಾಂಕ್ ಕಲಬುರ್ಗಿ ಸೇಡಮ್ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಕಲಬುರಗಿ ರಂಗಾಯಣದ ನಿರ್ದೇಶಕ ಮತ್ತು ಹಿರಿಯ ಸಾಹಿತಿ ಪ್ರಭಾಕರ ಜೋಶಿ ಕೃತಿ ಪರಿಚಯ ಮಾಡಲಿದ್ದಾರೆ ಎಂದು ಪ್ರಕಾಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.