ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಅದು ಲಿಂಗ ಸಾಹಿತ್ಯ:ಚನ್ನವೀರಶ್ರೀ ಹಿರೇಮಠ

ಕಲಬುರಗಿ:ಜು.31:ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಅದು ಲಿಂಗ ಸಾಹಿತ್ಯ. ಪೂಜ್ಯರು ರಚಿಸಿದ ಕೃತಿಗಳೆಲ್ಲವೂ ತಮ್ಮ ಲಿಂಗ ಪೂಜಾ ಸಮಯದಲ್ಲಿ ರಚಿಸುತ್ತಿದ್ದರು. ಶರಣರು ಹೇಳಿದ ಹಾಗೆ ಲಿಂಗ ಮೆಚ್ಚಿ ಹೌದು ಹೌದು ಎನ್ನಬೇಕು ಎನ್ನುವಂತೆ ಪುಟ್ಟರಾಜರ ಸಾಹಿತ್ಯ ಲಿಂಗ ಮೆಚ್ಚಿದ ಸಾಹಿತ್ಯವಾಗಿದೆ. ಬಹಿರಂಗದಲ್ಲಿ ದೃಷ್ಠಿ ಇಲ್ಲದಿದ್ದರೂ ಕೂಡಾ ಅಂತರದೃಷ್ಟಿಯಿಂದ ಕನ್ನಡ, ಹಿಂದಿ ಮತ್ತು ಸಂಸ್ಕøತ ತ್ರಿಭಾಷೆಯಲ್ಲಿ ನೂರಾರು ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ಸಾಹಿತ್ಯ ಸೇವೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಗೌರವ ಸಲ್ಲಬೇಕಿತ್ತು ಆದರೆ ಅದು ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೊನೆಯಪಕ್ಷ ಪೂಜ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಸರಕಾರ ಹೊರತರುವ ಮೂಲಕ ಪೂಜ್ಯರ ಸಾಹಿತ್ಯ ಸೇವೆ ಗೌರವಿಸ ಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಅವರು ಹೇಳಿದರು. ಅವರು ದಿನಾಂಕ 30 ಜುಲೈ 2023 ರಂದು ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸೇವಾ ಸಮಿತಿಯ ಜಿಲ್ಲಾ ಘಟಕದ ಉದ್ಘಾಟನೆ, ಗುರು ಸೇವಾ ಧೀಕ್ಷೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತ ಪುಟ್ಟರಾಜ ಸೇವಾ ಸಮಿತಿಯು ಪುಟ್ಟರಾಜ ಗುರು ಸಾಹಿತ್ಯ ಅದು ಸಾವಿರದ ಸಾಹಿತ್ಯ ಈ ಸಾಹಿತ್ಯ ಸಾವಿರ ಸಾವಿರ ಮನೆ ಮನೆಗಳಿಗೆ ತಲುಪಿಸುವ ಅಭಿಯಾನ ಆರಂಭಿಸಿ ಪುಟ್ಟರಾಜರ ಸಾಹಿತ್ಯ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಕೈಗೊಂಡಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೆಗಲತಿಪ್ಪಿ ಯವರು ಸಾವಿರದ ಸಾಹಿತ್ಯ ಸಾವಿರ ಸಾವಿರ ಮನೆ ಮನಗಳಿಗೆ ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ, ಸುಮಾರು ಹತ್ತು ಜನರಿಗೆ ಪುಟ್ಟರಾಜರ ಗುರು ವಚನ ಪ್ರಭಾ ಕೃತಿಗಳನ್ನು ಸಾಂಕೇತಿಕವಾಗಿ ವಿತರಿಸಿ ಪುಟ್ಟರಾಜರ ಸಾಹಿತ್ಯ ಪ್ರಚಾರ ಮಾಡುವ ಅವಶ್ಯಕತೆ ಇದೆ. ಈ ಗ್ರಂಥ ದಾಸೋಹ ಸೇವೆ ಕೈಗೆತ್ತಿಕೊಂಡಿರುವ ಸೇವಾ ಸಮಿತಿಯ ಕಾರ್ಯಾ ಶ್ಲಾಘನೀಯ ಎಂದು ಹೇಳಿದರು. ಸಮಾರಂಭದ ಸಾನಿಧ್ಯವನ್ನು ವಹಿಸಿಕೊಂಡಿದ್ದ ಷ. ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸೇವಾ ಸಮಿತಿಯ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಗುರು ಸೇವಾ ಧೀಕ್ಷೆ ನೀಡಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಸಂಘ ಸಂಸ್ಥೆಯನ್ನು ಕಟ್ಟಿಕೊಂಡು ಕಲೆ ಸಂಸ್ಕೃತಿ ಮತ್ತು ಗುರು ಸೇವೆ ಮಾಡಿಕೊಂಡು ಬಂದಿರುವ ರೇವಯ್ಯ ವಸ್ತ್ರದಮಠ ದಯಾನಂದಸ್ವಾಮಿ ಹಿರೇಮಠ, ಸಿದ್ಧಣ್ಣ ದೇಸಾಯಿ ಕಲ್ಲೂರು, ಅಮರಪ್ರಿಯ ಹಿರೇಮಠ, ಶಿವ ಶಂಕರ ಬಿರಾದಾರ, ಅಣ್ಣಾರಾವ ಮತ್ತಿ ಮಡು, ಬಾಬುರಾವ್ ಖೋಬಾಳ, ಇವರುಗಳಿಗೆ ಸತ್ಕರಿಸಲಾಯಿತು. ವೇದಿಕೆಯಲ್ಲಿ ಅಣವಿರಯ್ಯ ಪ್ಯಾಟಿಮನಿ, ಜಗದೀಶ ಮರಪಳ್ಳಿ, ಡಾ. ವಿಜಯ ಕುಮಾರ ಪರುತೆ, ಮಡಿವಾಳಯ್ಯ ಹಿರೇಮಠ ಕೊರಳ್ಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಯೋಜಿಸಿದ ವಚನ ಮತ್ತು ಕವಿಗೋಷ್ಠಿಯಲ್ಲಿ 25 ಕವಿಗಳು ಆಧುನಿಕ ವಚನ ಮತ್ತು ಭಕ್ತಿ ಪ್ರಧಾನ ಕವನ ವಾಚನ ಮಾಡಿದರು. ಅಮರ ಕಲಾವೃಂದ ಹಾಗೂ ಕಲಬುರ್ಗಿ ನಗರದ ಆಕಾಶವಾಣಿ ದೂರದರ್ಶದ ಖ್ಯಾತ ಕಲಾವಿದರಿಂದ ಶಾಸ್ತ್ರೀಯ ಮತ್ತು ವಚನ ಸಂಗೀತ ಜರುಗಿತು. ಕಾರ್ಯಕ್ರಮವನ್ನು ಸೇವಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಭೀಮರಾಯ ಹೇಮನೂರ ನಿರ್ವಹಿಸಿದರೆ, ಶ್ರೀ ಶರಣಯ್ಯ ಸ್ವಾಮಿ ಸ್ವಾಗತಿಸಿದರು. ಕವಿಗೋಷ್ಠಿಯನ್ನು ಸುನಂದಾ ಕಲ್ಲಾ ಜೇವರ್ಗಿ ನಡೆಸಿಕೊಟ್ಟರು. ಸಿದ್ಧಾರೂಢ ಅವರಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ವಂದಿಸಿದರು.