ಡಾ. ದೇಶಪಾಂಡೆಯವರಿಗೆ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ

ಬೀದರ:ಸೆ.10:ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಚೇತನ ಫೌಂಡೇಷನ್ ಕರ್ನಾಟಕ ಇವರ ಸಹಯೋಗದಲ್ಲಿ ಧಾರವಾಡದ ಕನಕ ಭವನ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದಿನಾಂಕ 08-09-2023 _ರಂದು ಧಾರವಾಡ ನುಡಿ ಸಡಗರ ಬೃಹತ್ ಕನ್ನಡ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಈ ವೇದಿಕೆಯಲ್ಲಿ ಕನ್ನಡ ನಾಡು ನುಡಿಗಾಗಿ ಸೇವೆ ಗೈಯತ್ತಿರುವ ಬೀದರಿನ ಹಿರಿಯ ಸಾಹಿತಿಗಳಾದ ಡಾ. ಎಂ.ಜಿ.ದೇಶಪಾಂಡೆಯವರಿಗೆ “ಬೇಂದ್ರೆ ನುಡಿಸಿರಿ” ರಾಷ್ಟ್ರೀಯ ಪ್ರಶಸ್ತಿಯನ್ನು ಫ್ರದಾನಮಾಡಿ ಗೌರವಿಸಲಾಯಿತು.

ಬೀದರ ಜಿಲ್ಲೆಯ ಸಾಹಿತಿಗಳಾದ ಡಾ. ರಾಜಕುಮಾರ ಹೆಬ್ಬಾಳೆ, ಹಂಶಕವಿ, ಡಾ. ಶ್ರೇಯಾ ಮಹೀಂದ್ರಕರ್, ಡಾ. ರಾಮಚಂದ್ರ ಗಣಾಪುರ, ಬಾಬುರಾವ ಮುಧಾಳೆ, ಆರ್. ಎಸ್. ಬಿರಾದಾರ, ಸೂರ್ಯಕಾಂತ ವಿಶ್ವಕರ್ಮ, ದೇವೇಂದ್ರ ವಲ್ಲೇಪುರೆ, ಎಸ್. ಬಿ. ಕುಚಬಾಳ, ದಿಲೀಪ ಮೋಘಾ, ಕಿರಣ ಮಾಹಾರಾಜ, ಸಿದ್ರಾಮಪ್ಪ ಕಾಪಲಾಪುರೆ, ಮಲ್ಲಿಕಾರ್ಜುನ ಸಂಗೋಳಗಿ, ಅರವಿಂದ ಕುಲಕರ್ಣಿ, ಡಾ. ಆನಂದರಾವ.ಸಿ., ಕೃಷ್ಣಾ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ, ಮೋಹನ ಪಾಟೀಲ, ಶ್ರೀಕಾಂತ ಪಾಟೀಲ ಮಲ್ಲಿಕಾರ್ಜುನ ಸಂಗಮ ಮುಂತಾದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.