ಡಾ.ದರ್ಶನ ಬಿರಾದಾರ ಆಯ್ಕೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.18: ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ ಹೈದರಾಬಾದ ನಲ್ಲಿ ಏರ್ಪಡಿಸಿದ ರಾಷ್ಟ್ರಮಟ್ಟದ ಹೃದಯ ರೋಗ ತಜ್ಞರ ಸಮಾವೇಶದಲ್ಲಿ ಉತ್ತಮ ಉದಯೋನ್ಮುಖ ಹೃದಯ ರೋಗತಜ್ಞ ಎಂದು ಮುಧೋಳ ನಗರದ ಹೃದಯರೋಗ ತಜ್ಞ ಡಾ.ದರ್ಶನ ಮನೋಹರ ಬಿರಾದಾರ ಆಯ್ಕೆಯಾಗಿದ್ದಾರೆ.
ಪ್ರತಿ ವರ್ಷ ಯುವ ಹೃದಯ ರೋಗ ತಜ್ಞರನ್ನು ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾದಿಂದ ಉತ್ತಮ ಉದಯೋನ್ಮುಖ ತಜ್ಞರನ್ನು ಆಹ್ವಾನಿಸಿ, ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಅದರಲ್ಲಿ ಡಾ.ದರ್ಶನ ಆಯ್ಕೆಯಾಗಿರುವುದು ಸಂತಸತಂದಿದೆ.
ಸದ್ಯ ಡಾ.ದರ್ಶನ ಅವರು ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಹಾರ್ಟ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಪ್ರಶಸ್ತಿಗೆ ಭಾಜರಾದ ಡಾ.ದರ್ಶನ ಬಿರಾದಾರ ಅವರಿಗೆ ವಿವಿ ಕುಲಾಧಿಪತಿ, ಸಚಿವ ಎಂ.ಬಿ.ಪಾಟೀಲ್, ಕುಲಪತಿ ಡಾ.ಆರ್.ಎಸ್.ಮುಧೋಳ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಅಭಿನಂದಿಸಿದ್ದಾರೆ.